×
Ad

ಚಿನ್ನದ ಗಣಿ ಕುಸಿತ; ಕನಿಷ್ಟ 23 ಮಂದಿ ಸಾವು

Update: 2024-02-22 21:48 IST

Photo: aljazeera.com

ಕರಾಕಸ್: ದಕ್ಷಿಣ ವೆನೆಝುವೆಲಾದ ಬೊಲಿವರ್ ರಾಜ್ಯದಲ್ಲಿ ಸಂಭವಿಸಿದ ಚಿನ್ನದ ಗಣಿ ದುರಂತದಲ್ಲಿ ಕನಿಷ್ಟ 23 ಮಂದಿ ಸಾವನ್ನಪ್ಪಿದ್ದು ಇತರ 11 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಬುಲ್ಲಾ ಲೋಕಾ ನಗರದ ಬಳಿಯ ಅರಣ್ಯಪ್ರದೇಶದಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಚಿನ್ನದ ಗಣಿಯಲ್ಲಿ ಸುಮಾರು 200 ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಏಕಾಏಕಿ ಬದಿಯ ಗೋಡೆ ಕುಸಿದಿದೆ. ಇದುವರೆಗೆ ಸುಮಾರು 23 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಕೆಲವರು ಗಣಿಯ ಆಳದಿಂದ ಹೊರಬರಲು ಯಶಸ್ವಿಯಾಗಿದ್ದರೆ ಕುಸಿದು ಬಿದ್ದ ಮಣ್ಣಿನಡಿ ಇರುವವರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ ಎಂದು ನಾಗರಿಕ ಭದ್ರತಾ ಇಲಾಖೆಯ ಸಹಾಯಕ ಸಚಿವ ಕಾರ್ಲೋಸ್ ಆ್ಯಂಪುಯೆಡ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News