ಜೆ.ಡಿ. ವ್ಯಾನ್ಸ್ | Photo Credit : AP

ವಾಶಿಂಗ್ಟನ್: ಎಚ್-1ಬಿ ವೀಸಾ ದುರುಪಯೋಗ ಮತ್ತು ವಂಚನೆಯ ಕುರಿತು ಅಮೆರಿಕದ ಉಪಾಧ್ಯಕ್ಷ ಜೆ. ಡಿ. ವ್ಯಾನ್ಸ್ ವಾಶಿಂಗ್ಟನ್‍ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಎಚ್-1ಬಿ ವೀಸಾದಾರರನ್ನು `ವಿದೇಶಿ ಗುತ್ತಿಗೆ ಸೇವಕರು' ಎಂದು ಕರೆದಿದ್ದಾರೆ.

ಮೈಕ್ರೋಸಾಫ್ಟ್ ಕಂಪೆನಿಯು ಖಾಯಂ ಕಾರ್ಮಿಕ ದೃಢೀಕರಣ ಕಾರ್ಯಕ್ರಮವನ್ನು (ಪಿಇಆರ್‍ಎಂ) ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ವ್ಯಾನ್ಸ್, ಅಮೆರಿಕದ ನಾಗರಿಕರನ್ನು ಕೆಲಸದಿಂದ ತೆಗೆದುಹಾಕಿ ಅವರ ಜಾಗದಲ್ಲಿ `ವಿದೇಶಿ ಗುತ್ತಿಗೆ ಕಾರ್ಮಿಕರನ್ನು' ನೇಮಿಸಿಕೊಳ್ಳುವ ಬದಲು, ಅತ್ಯುತ್ತಮ ಅಮೆರಿಕನ್ ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಕೆಂದು ಪ್ರತಿಪಾದಿಸಿದರು. ಎಚ್-1ಬಿ ವೀಸಾ ಕಾರ್ಯಕ್ರಮದ ದುರುಪಯೋಗದ ವಿರುದ್ಧದ ಫೆಡರಲ್ ಕ್ರಮಗಳ ಭಾಗವಾಗಿ, ಅಮೆರಿಕ ತನ್ನ ನಾಗರಿಕರ ಬದಲಿಗೆ ವಿದೇಶೀಯರನ್ನು ನೇಮಿಸಿಕೊಂಡಿದ್ದಕ್ಕಾಗಿ ಮೈಕ್ರೋಸಾಫ್ಟ್‌ಗೆ ಸಂಬಂಧಿಸಿ ಪಿಇಆರ್‌ಎಂ ಕಾರ್ಯಕ್ರಮವನ್ನು ತಡೆಹಿಡಿದ ನಂತರ ಈ ಹೇಳಿಕೆ ಬಂದಿದೆ.

ಎಚ್-1ಬಿ ವೀಸಾ ಕಾರ್ಯಕ್ರಮವು ವಂಚನೆಯಿಂದ ಕೂಡಿದ್ದು, ಇದು ಅಮೆರಿಕದ ಉದ್ಯೋಗಿಗಳ ಅವಕಾಶಗಳನ್ನು ಕಸಿಯುತ್ತದೆ. ಕಂಪೆನಿಗಳು ಅಮೆರಿಕನ್ ಕಾರ್ಮಿಕರ ಬದಲಿಗೆ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮತ್ತು ವೇತನವನ್ನು ಕುಗ್ಗಿಸಲು ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿವೆ ಎಂದು ವ್ಯಾನ್ಸ್ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor