ಸಾಂದರ್ಭಿಕ ಚಿತ್ರ | Photo Credit : AP

ರಿಯಾದ್:  ಸೌದಿ ಅರೇಬಿಯಾ ಬೆಂಬಲಿತ ಯಮನ್ ಸರಕಾರವು ಇತ್ತೀಚಿನ ವಾರಗಳಲ್ಲಿ ಹೌತಿ ಬಂಡುಕೋರರಿಗೆ ಕಳೆದುಕೊಂಡ ಎಲ್ಲಾ ಪ್ರದೇಶಗಳನ್ನು ಮರಳಿ ವಶಪಡಿಸಿಕೊಳ್ಳುವವರೆಗೆ ಹೌತಿಗಳೊಂದಿಗೆ ಕದನ ವಿರಾಮಕ್ಕೆ ಸೌದಿ ಅರೇಬಿಯಾ ಒಪ್ಪಿಕೊಳ್ಳುವುದಿಲ್ಲ ಎಂದು ಪ್ರಾದೇಶಿಕ ಮೂಲವನ್ನು ಉಲ್ಲೇಖಿಸಿ ಎಎಫ್‍ಪಿ ವರದಿ ಮಾಡಿದೆ.

ಹೌತಿಗಳ ಸೇನಾ ಬೆದರಿಕೆಗಳಿಗೆ ತಾನು ಬಗ್ಗುವುದಿಲ್ಲ ಎಂದು ಸೌದಿ ಸ್ಪಷ್ಟಪಡಿಸಿದೆ. ಯಮನ್ ಸರಕಾರವನ್ನು ಬೆಂಬಲಿಸಲು 100 ಯುದ್ಧ ವಿಮಾನಗಳನ್ನು ನಿಯೋಜಿಸುವ ಮೂಲಕ ಹೌತಿಗಳ ವಿರುದ್ಧದ ಪ್ರತಿದಾಳಿಯಲ್ಲಿ ತಾನು ಭಾಗಿಯಾಗಿರುವುದಾಗಿ ಸೌದಿ ನೇತೃತ್ವದ ಒಕ್ಕೂಟವು ಈ ವಾರದ ಆರಂಭದಲ್ಲಿ ಘೋಷಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor