ಆರು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ ಹಮಾಸ್
Update: 2025-02-22 20:47 IST
PC : aljazeera.com
ಗಾಝಾ: ಗಾಝಾ ಕದನ ವಿರಾಮ ಒಪ್ಪಂದದ ಅನುಸಾರ ಶನಿವಾರ ಆರು ಒತ್ತೆಯಾಳುಗಳನ್ನು ಹಮಾಸ್ ರೆಡ್‍ಕ್ರಾಸ್ ಸಮಿತಿಗೆ ಹಸ್ತಾಂತರಿಸಿರುವುದಾಗಿ ವರದಿಯಾಗಿದೆ.
ಮಧ್ಯ ಗಾಝಾದ ನುಸೀರಾತ್ ಪ್ರದೇಶದಲ್ಲಿ ಮೂವರು ಒತ್ತೆಯಾಳುಗಳನ್ನು ರೆಡ್‍ಕ್ರಾಸ್‍ಗೆ ಹಸ್ತಾಂತರಿಸಲಾಗಿದೆ. ಸುಮಾರು 16 ತಿಂಗಳು ಒತ್ತೆಸೆರೆಯಲ್ಲಿದ್ದ ಇವರನ್ನು ರೆಡ್‍ಕ್ರಾಸ್ ಅಧಿಕಾರಿಗಳು ಇಸ್ರೇಲ್‍ಗೆ ಹಸ್ತಾಂತರಿಸಿದ್ದಾರೆ. ದಕ್ಷಿಣ ಗಾಝಾದ ರಫಾ ನಗರದಲ್ಲಿ ನಡೆದ ಪ್ರತ್ಯೇಕ ಕಾರ್ಯಕ್ರಮದಲ್ಲಿ ಇಬ್ಬರು ಒತ್ತೆಯಾಳುಗಳನ್ನು ರೆಡ್‍ಕ್ರಾಸ್‍ಗೆ ಹಸ್ತಾಂತರಿಸಲಾಗಿದೆ. ಆರನೇ ಒತ್ತೆಯಾಳು ಇಥಿಯೋಪಿಯಾ ಪ್ರಜೆ ಹಿಷಾಮ್ ಅಲ್-ಸಯೀದ್‍ರನ್ನೂ ಹಮಾಸ್ ಬಿಡುಗೆಗೊಳಿಸಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ 602 ಫೆಲೆಸ್ತೀನಿಯನ್ ಕೈದಿಗಳನ್ನು ಬಿಡುಗಡೆಗೊಳಿಸುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.