ಹಮಾಸ್ ಹಸ್ತಾಂತರಿಸಿದ ಮೃತದೇಹ ಒತ್ತೆಯಾಳುವಿನದಲ್ಲ : ಇಸ್ರೇಲ್ ಸೇನೆ
Photo Credi : NDTV
ಟೆಲ್‌ಅವೀವ್,ಅ.15: ಗಾಝಾ ಕದನವಿರಾಮದ ಭಾಗವಾಗಿ ಹಮಾಸ್ ಹೋರಾಟಗಾರರು ಮಂಗಳವಾರ ಇಸ್ರೇಲ್‌ಗೆ ಹಸ್ತಾಂತರಿಸಿದ್ದ ಮೃತದೇಹಗಳಲ್ಲೊಂದು ಗಾಝಾದಲ್ಲಿ ಬಂಧಿಯಾಗಿದ್ದ ಒತ್ತೆಯಾಳುವಿನದಲ್ಲ ಎಂದು ಇಸ್ರೇಲ್ ಸೇನೆ ಬುಧವಾರ ತಿಳಿಸಿದೆ.
ಇಸ್ರೇಲ್‌ನ ರಾಷ್ಟ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ ಪರಿಶೀಲನೆಯಲ್ಲಿ ಹಮಾಸ್ ಹಸ್ತಾಂತರಿಸಿದ ನಾಲ್ಕನೇ ಮೃತದೇಹವು ಯಾವುದೇ ಒತ್ತೆಯಾಳನ್ನೂ ಹೋಲುವುದಿಲ್ಲವೆಂದು ಇಸ್ರೇಲಿ ಸೇನೆ ತಿಳಿಸಿದೆ.
ಹಮಾಸ್ ಮಂಗಳವಾರ ನಾಲ್ಕು ಮೃತದೇಹಗಳನ್ನು ಇಸ್ರೇಲ್‌ಗೆ ಹಸ್ತಾಂತರಿಸಿತ್ತು. ಸೋಮವಾರ ಅದು 20 ಜೀವಂತ ಒತ್ತೆಯಾಳುಗಳ ಜೊತೆ ನಾಲ್ವರ ಮೃತದೇಹಗಳನ್ನು ಬಿಡುಗಡೆಗೊಳಿಸಿತ್ತು. ಒಟ್ಟಾರೆಯಾಗಿ ಇಸ್ರೇಲ್ 28 ಮಂದಿ ಒತ್ತೆಯಾಳುಗಳ ಮೃತದೇಹವನ್ನು ಪಡೆದುಕೊಳ್ಳುವ ನಿರೀಕ್ಷೆಯಲ್ಲಿದೆ.
ಬುಧವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹೇಳಿಕೆಯೊಂದನ್ನು ನೀಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಮಂಡಿಸಿರುವ ಕದನವಿರಾಮ ಒಪ್ಪಂದದಲ್ಲಿ ಒತ್ತೆಯಾಳುಗಳ ಮೃತದೇಹಗಳ ಹಸ್ತಾಂತರದ ಕುರಿತು ಅಂಶಗಳನ್ನು ಹಮಾಸ್ ಈಡೇರಿಸಬೇಕೆಂದು ಆಗ್ರಹಿಸಿದ್ದಾರೆ.