ಹಮಾಸ್ ಸಹಸಂಸ್ಥಾಪಕ ಮುಹಮ್ಮದ್ ಇಸ್ಸಾ ಹತ್ಯೆ: ವರದಿ
Update: 2025-06-29 22:17 IST
X/@IDF
ಜೆರುಸಲೇಂ: ಇಸ್ರೇಲ್ ಮೇಲೆ 2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಗೆ ಹೊಣೆಗಾರನಾಗಿರುವ ಹಮಾಸ್ ನ ಸಹಸಂಸ್ಥಾಪಕ ಹಖಮ್ ಮುಹಮ್ಮದ್ ಇಸ್ಸ ಅಲ್- ಇಸ್ಸಾ ಶುಕ್ರವಾರ ಗಾಝಾ ನಗರದ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟಿರುವುದಾಗಿ ಇಸ್ರೇಲಿ ಮಿಲಿಟರಿ ರವಿವಾರ ಪ್ರತಿಪಾದಿಸಿದೆ.
ಗಾಝಾ ನಗರದೊಳಗೆ ಸಬ್ರಾ ಎಂಬ ಪ್ರದೇಶದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹಮಾಸ್ ಸಹಸಂಸ್ಥಾಪಕ, ಮಿಲಿಟರಿ ಘಟಕದ ಪ್ರಮುಖ ನಾಯಕ ಅಲ್-ಇಸ್ಸಾರನ್ನು ಹತ್ಯೆ ಮಾಡಲಾಗಿದೆ. ಅಕ್ಟೋಬರ್ 7ರ ದಾಳಿಯ ಯೋಜನೆ ರೂಪಿಸಿ ಕಾರ್ಯಗತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇಸ್ಸಾ, ಇಸ್ರೇಲ್ ಮೇಲೆ ಮತ್ತಷ್ಟು ದಾಳಿ ನಡೆಸುವ ಸಂಚು ರೂಪಿಸುತ್ತಿದ್ದ ಹಿನ್ನೆಲೆಯಲ್ಲಿ ಇಸ್ರೇಲ್ ಭದ್ರತಾ ಏಜೆನ್ಸಿಯೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಇಸ್ರೇಲ್ ಭದ್ರತಾ ಏಜೆನ್ಸಿ(ಐಡಿಎಫ್) ಹೇಳಿದೆ.