ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ : ಇರಾನ್ ಮೇಲಿನ ಅಮೆರಿಕದ ದಾಳಿಯನ್ನು ಖಂಡಿಸಿದ ಹಮಾಸ್
Update: 2025-06-22 11:08 IST
Photo | BBC
ಗಾಝಾ : ಇರಾನ್‌ನ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ನಡೆಸಿದ ದಾಳಿಯನ್ನು ಹಮಾಸ್ ಖಂಡಿಸಿದೆ.
ಇರಾನ್‌ನ ಭೂಪ್ರದೇಶ ಮತ್ತು ಸಾರ್ವಭೌಮತ್ವದ ವಿರುದ್ಧ ಅಮೆರಿಕದ ನಿರ್ಲಜ್ಜ ಆಕ್ರಮಣವನ್ನು ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸುವುದಾಗಿ ಹಮಾಸ್ ಹೇಳಿದೆ.
ಇರಾನ್ ವಿರುದ್ಧದ ಅಮೆರಿಕದ ಆಕ್ರಮಣವು ಅಪಾಯಕಾರಿ ಬೆಳವಣಿಗೆಯಾಗಿದೆ. ಇದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹಮಾಸ್ ಹೇಳಿದೆ.
ನಾವು ಇರಾನ್, ಅದರ ನಾಯಕತ್ವ ಮತ್ತು ಇರಾನ್ ಜನತೆಯೊಂದಿಗೆ ನಮ್ಮ ಒಗ್ಗಟ್ಟನ್ನು ಘೋಷಿಸುತ್ತೇವೆ. ತನ್ನ ಸಾರ್ವಭೌಮತ್ವವನ್ನು ರಕ್ಷಿಸುವ ಇರಾನ್‌ನ ಸಾಮರ್ಥ್ಯದಲ್ಲಿ ನಮಗೆ ಸಂಪೂರ್ಣವಾದ ವಿಶ್ವಾಸವಿದೆ ಎಂದು ಹಮಾಸ್ ಹೇಳಿದೆ.