×
Ad

ಇಸ್ರೇಲ್‍ನಿಂದ ಫೆಲೆಸ್ತೀನ್ ಕೈದಿಗಳ `ನಿಧಾನ ಹತ್ಯೆ': ಹಮಾಸ್ ಆರೋಪ

Update: 2025-02-08 22:14 IST

ಸಾಂದರ್ಭಿಕ ಚಿತ್ರ Photo Credit | NDTV

ಗಾಝಾ: ಇಸ್ರೇಲ್‌ ನ ಜೈಲಿನಲ್ಲಿ ಬಂಧನದಲ್ಲಿರುವ ಫೆಲೆಸ್ತೀನ್ ಕೈದಿಗಳನ್ನು `ನಿಧಾನವಾಗಿ ಹತ್ಯೆ'ಗೈಯುವ ನೀತಿಯನ್ನು ಇಸ್ರೇಲ್ ಅಳವಡಿಸಿಕೊಂಡಿದೆ ಎಂದು ಹಮಾಸ್ ಆರೋಪಿಸಿದೆ.

ಕದನ ವಿರಾಮ ಒಪ್ಪಂದದ ಅನ್ವಯ ಶನಿವಾರ ಇಸ್ರೇಲ್ ಬಿಡುಗಡೆಗೊಳಿಸಿದ ಕೈದಿಗಳಲ್ಲಿ 7 ಜನರು ತೀರಾ ಅಸ್ವಸ್ಥರಾಗಿದ್ದರಿಂದ ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇಸ್ರೇಲ್‌ ನ ಜೈಲು ಅಧಿಕಾರಿಗಳು ನಮ್ಮ ಕೈದಿಗಳ ಮೇಲೆ ವ್ಯವಸ್ಥಿತ ಹಲ್ಲೆ ಮತ್ತು ದೌರ್ಜನ್ಯ ನಡೆಸಿರುವುದನ್ನು ಇದು ಪ್ರತಿಬಿಂಬಿಸಿದೆ ಎಂದು ಹಮಾಸ್ ಪ್ರತಿಪಾದಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News