ಗಾಝಾ ಕದನ ವಿರಾಮ ಪ್ರಸ್ತಾಪಕ್ಕೆ ಹಮಾಸ್ ಪ್ರತಿಕ್ರಿಯೆ ಸ್ವೀಕಾರಾರ್ಹವಲ್ಲ: ಅಮೆರಿಕ
Update: 2025-06-01 20:42 IST
PC: x.com/WIONews
ವಾಷಿಂಗ್ಟನ್: ಗಾಝಾದಲ್ಲಿ ಕದನ ವಿರಾಮದ ಬಗ್ಗೆ ಅಮೆರಿಕ ಮುಂದಿರಿಸಿದ ಪ್ರಸ್ತಾಪಕ್ಕೆ ಹಮಾಸ್ ನ ಪ್ರತಿಕ್ರಿಯೆ `ಸಂಪೂರ್ಣ ಸ್ವೀಕಾರಾರ್ಹವಲ್ಲ' ಅದು ನಮ್ಮನ್ನು ಹಿಂದಕ್ಕೆ ಕರೆದೊಯ್ಯುತ್ತದೆ ' ಎಂದು ಟ್ರಂಪ್ ಆಡಳಿತದ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಹೇಳಿದ್ದಾರೆ.
`ಹಮಾಸ್ ನ ಪ್ರತಿಕ್ರಿಯೆ ಸ್ವೀಕಾರಾರ್ಹವಲ್ಲ. ಮುಂದಿನ ವಾರಗಳಲ್ಲಿ ಪ್ರಾರಂಭಿಸಬಹುದಾದ ಮಾತುಕತೆಗೆ ಆಧಾರವಾಗಿ ನಾವು ಮುಂದಿಟ್ಟಿರುವ ಪ್ರಸ್ತಾಪವನ್ನು ಹಮಾಸ್ ಒಪ್ಪಿಕೊಳ್ಳಬೇಕು' ಎಂದವರು ಸಾಮಾಜಿಕ ಮಾಧ್ಯಮ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಅಮೆರಿಕದ ಯೋಜನೆಗೆ ಕೆಲವು ಬದಲಾವಣೆಗಳೊಂದಿಗೆ ಹಮಾಸ್ ಉತ್ತರಿಸಿತ್ತು.
`ಶಾಶ್ವತ ಕದನ ವಿರಾಮ, ಗಾಝಾ ಪಟ್ಟಿಯಿಂದ ಸಮಗ್ರ ವಾಪಸಾತಿ, ಗಾಝಾ ಪಟ್ಟಿಯ ಜನರಿಗೆ ನೆರವು ಪೂರೈಕೆಯನ್ನು ಖಾತರಿಪಡಿಸುವುದು' ಈ ಅಂಶಗಳನ್ನು ಕದನ ವಿರಾಮ ಒಪ್ಪಂದದಲ್ಲಿ ಸೇರಿಸಬೇಕು ಎಂದು ಹಮಾಸ್ ಒತ್ತಾಯಿಸಿತ್ತು.