×
Ad

ಕದನ ವಿರಾಮ ಉಲ್ಲಂಘಿಸಿದರೆ ಹಮಾಸ್ ನಾಶವಾಗಲಿದೆ : ಡೊನಾಲ್ಡ್ ಟ್ರಂಪ್

Update: 2025-10-21 22:10 IST

ಡೊನಾಲ್ಡ್ ಟ್ರಂಪ್ | Photo Credit : PTI

ವಾಷಿಂಗ್ಟನ್, ಅ.21: ಕದನ ವಿರಾಮ ಒಪ್ಪಂದವನ್ನು ಗೌರವಿಸಲು ಹಮಾಸ್‍ಗೆ ಒಂದು ಅವಕಾಶ ನೀಡುತ್ತೇನೆ. ಒಂದು ವೇಳೆ ಅವರು ಕದನ ವಿರಾಮವನ್ನು ಉಲ್ಲಂಘಿಸಿದರೆ ನಿರ್ಮೂಲನೆ ಮಾಡಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಒಳ್ಳೆಯವರಾಗುತ್ತಾರೆ, ಉತ್ತಮ ರೀತಿಯಲ್ಲಿ ವರ್ತಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ನಾವು ಹಮಾಸ್‍ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ನಿರೀಕ್ಷೆಯನ್ನು ಹುಸಿ ಮಾಡಿದರೆ ಅವರು ನಿರ್ಮೂಲವಾಗುತ್ತಾರೆ ಮತ್ತು ಇದು ಅವರಿಗೂ ತಿಳಿದಿದೆ. ಅವರು ಒರಟಾಗಿ ವರ್ತಿಸಿ ಮಾಡಬಾರದ ಕೆಲಸಗಳನ್ನು ಮಾಡಿದ್ದರು. ಇನ್ನೂ ಅದನ್ನೇ ಮುಂದುವರಿಸಿದರೆ ನಾವು ಮಧ್ಯಪ್ರವೇಶಿಸಿ ಅವರನ್ನು ನಿರ್ಮೂಲನೆ ಮಾಡುತ್ತೇವೆ' ಎಂದು ಟ್ರಂಪ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News