ಅಮೆರಿಕ | ಹೆದ್ದಾರಿಗೆ ಅಪ್ಪಳಿಸಿದ ಹೆಲಿಕಾಪ್ಟರ್ : ಮೂವರಿಗೆ ಗಂಭೀರ ಗಾಯ
Update: 2025-10-07 21:22 IST
Photo Credit : Screengrab \ X
ನ್ಯೂಯಾರ್ಕ್, ಅ.7: ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ನಗರದ ಬಳಿ ವೈದ್ಯಕೀಯ ಹೆಲಿಕಾಪ್ಟರ್ ಹೆದ್ದಾರಿಗೆ ಅಪ್ಪಳಿಸಿದ್ದರಿಂದ ಮಹಿಳೆ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ರೋಗಿಯನ್ನು ಆಸ್ಪತ್ರೆಗೆ ಸಾಗಿಸಿ ವಾಪಾಸು ತೆರಳುತ್ತಿದ್ದಾಗ ದುರಂತ ಸಂಭವಿಸಿದ್ದು ಹೆಲಿಕಾಪ್ಟರ್ ಹೆದ್ದಾರಿಗೆ ಅಪ್ಪಳಿಸಿದ ಸಂದರ್ಭ ಸಮೀಪದಲ್ಲೇ ವಾಹನಗಳು ಹಾದು ಹೋಗುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಹೆಲಿಕಾಪ್ಟರ್‌ನಲ್ಲಿ ಪೈಲಟ್, ಮಹಿಳಾ ನರ್ಸ್ ಮತ್ತು ವೈದ್ಯಕೀಯ ಸಿಬ್ಬಂದಿಯಿದ್ದರು. ಹೆಲಿಕಾಪ್ಟರ್‌ನಡಿ ಸಿಲುಕಿದ್ದ ಮಹಿಳಾ ನರ್ಸ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆದ್ದಾರಿಯಲ್ಲಿದ್ದ ವಾಹನಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.