ಕ್ಯಾಲಿಫೋರ್ನಿಯಾ | ಹಿಂದು ದೇವಸ್ಥಾನದಲ್ಲಿ ದಾಂಧಲೆ
Update: 2024-09-26 22:45 IST
PC : X
ನ್ಯೂಯಾರ್ಕ್ : ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ನಗರದಲ್ಲಿರುವ ಸ್ವಾಮಿನಾರಾಯಣ ಮಂದಿರದ ಗೋಡೆಯ ಮೇಲೆ ಹಿಂದು ವಿರೋಧಿ ಘೋಷಣೆ ಬರೆದು ಪೆಯಿಂಟ್ ಎರಚಿದ್ದಲ್ಲದೆ ದೇವಸ್ಥಾನಕ್ಕೆ ನೀರು ಪೂರೈಸುವ ಪೈಪ್‍ಗಳನ್ನು ತುಂಡರಿಸಿ ದಾಂಧಲೆ ನಡೆಸಿರುವ ಘಟನೆ ಸೆಪ್ಟಂಬರ್ 25ರ ರಾತ್ರಿ ನಡೆದಿರುವುದಾಗಿ ವರದಿಯಾಗಿದೆ.
`ಹಿಂದುಗಳು ತಕ್ಷಣ ಹಿಂದಿರುಗಿ' ಎಂದು ಬೆದರಿಸುವ ಪದಗಳನ್ನು ದೇವಸ್ಥಾನದ ಗೋಡೆಯ ಮೇಲೆ ಬರೆದಿರುವುದು ಸ್ಥಳೀಯ ಹಿಂದು ಸಮುದಾಯದಲ್ಲಿ ತೀವ್ರ ಆತಂಕ, ಕಳವಳಕ್ಕೆ ಕಾರಣವಾಗಿದೆ. ದ್ವೇಷಾಪರಾಧ ಪ್ರಕರಣ ದಾಖಲಿಸಲಾಗಿದ್ದು ಅಧಿಕಾರಿಗಳು ನಡೆಸುವ ತನಿಖೆಯಲ್ಲಿ ಸಹಕರಿಸುವುದಾಗಿ ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ. ಸುಮಾರು 10 ದಿನಗಳ ಹಿಂದೆ ನ್ಯೂಯಾರ್ಕ್‍ನ ಮೆಲ್ವಿಲ್ಲೆ ನಗರದಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರದಲ್ಲೂ ದಾಂಧಲೆ ನಡೆಸಿದ ಘಟನೆ ವರದಿಯಾಗಿತ್ತು.