×
Ad

ವಿಮಾನ ಪತನ: ಖ್ಯಾತ ಹಾಲಿವುಡ್ ನಟ, ಇಬ್ಬರು ಪುತ್ರಿಯರು ಮೃತ್ಯು

Update: 2024-01-06 11:16 IST

 ಕ್ರಿಸ್ಟಿಯನ್ ಆಲಿವರ್ (Photo: X/@ani_digital)

ಲಾಸ್ ಏಂಜಲೀಸ್: ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಕೆರಿಬಿಯನ್ ಸಮುದ್ರದಲ್ಲಿ ವಿಮಾನ ಪತನಗೊಂಡಿದ್ದು, ಘಟನೆಯಲ್ಲಿ ಜರ್ಮನ್ ಮೂಲದ ಹಾಲಿವುಡ್ ನಟ ಕ್ರಿಸ್ಟಿಯನ್ ಆಲಿವರ್, ಅವರ ಇಬ್ಬರು ಪುತ್ರಿಯರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾರ್ಜ್ ಕ್ಲೂನಿ ಅವರೊಂದಿಗೆ "ದಿ ಗುಡ್ ಜರ್ಮನ್" ಮತ್ತು 2008 ರಲ್ಲಿ "ಸ್ಪೀಡ್ ರೇಸರ್" ನಲ್ಲಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡ ಆಲಿವರ್ ಅವರು ಗುರುವಾರ ಖಾಸಗಿ ಒಡೆತನದ ವಿಮಾನ ಅಪಘಾತದಲ್ಲಿ ನಿಧನರಾದರು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೀನುಗಾರರು, ಮುಳುಗುಗಾರರು ಮತ್ತು ಕೋಸ್ಟ್ ಗಾರ್ಡ್ ತಕ್ಷಣ ಘಟನಾ ಸ್ಥಳಕ್ಕೆ ತೆರಳಿದ್ದು, ನಾಲ್ವರ ಮೃತದೇಹಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News