ಹಾಂಕಾಂಗ್ ಸಿಕ್ಸಸ್: ಪಾಕಿಸ್ತಾನದ ವಿರುದ್ಧ ಭಾರತ ಜಯಭೇರಿ
Update: 2025-11-07 22:24 IST
PC : X
ಹೊಸದಿಲ್ಲಿ, ನ.7: ಹಾಂಕಾಂಗ್ ಸಿಕ್ಸರ್ ಕ್ರಿಕೆಟ್ ಟೂರ್ನಿಯ ಮಳೆ ಬಾಧಿತ ‘ಸಿ’ ಗುಂಪಿನ ಪಂದ್ಯದಲ್ಲಿ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಡಿ.ಎಲ್.ಎಸ್. ನಿಯಮದಡಿ 2 ರನ್‌ನಿಂದ ರೋಚಕ ಜಯ ಸಾಧಿಸಿದೆ.
ಶುಕ್ರವಾರ ಮೊದಲು ಬ್ಯಾಟಿಂಗ್ ಮಾಡಿದ ಭಾರತವು ರಾಬಿನ್ ಉತ್ತಪ್ಪ(28 ರನ್, 11 ಎಸೆತ, 3 ಸಿಕ್ಸರ್,2 ಬೌಂಡರಿ)ಅಬ್ಬರದ ನೆರವಿನಿಂದ 6 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿತು. ಭರತ್ ಚಿಪ್ಲಿ(24ರನ್)ಹಾಗೂ ನಾಯಕ ದಿನೇಶ್ ಕಾರ್ತಿಕ್(17 ರನ್)ಇನಿಂಗ್ಸ್ ಆಧರಿಸಿದರು.
ಗೆಲ್ಲಲು 87 ರನ್ ಗುರಿ ಪಡೆದ ಪಾಕಿಸ್ತಾನ ತಂಡ ಭಾರೀ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಾಗ 3 ಓವರ್‌ಗಳಲ್ಲಿ 1 ವಿಕೆಟ್‌ಗೆ 41 ರನ್ ಗಳಿಸಿತ್ತು. ಡಿಎಲ್‌ಎಸ್ ನಿಯಮದ ಪ್ರಕಾರ ಪಾಕಿಸ್ತಾನ 2 ರನ್ ಹಿನ್ನಡೆಯಲ್ಲಿತ್ತು. ಸ್ಟುವರ್ಟ್ ಬಿನ್ನಿ(1-7)ಭಾರತದ ಗೆಲುವಿಗೆ ನಿರ್ಣಾಯಕ ಪಾತ್ರವಹಿಸಿದರು. ಉತ್ತಪ್ಪ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದರು.