×
Ad

ಗಾಝಾ ಮಾನವೀಯ ಪರಿಸ್ಥಿತಿ ನೈತಿಕವಾಗಿ ಸ್ವೀಕಾರಾರ್ಹವಲ್ಲ: ಕ್ಯಾಥೊಲಿಕ್ ಚರ್ಚ್ ಧರ್ಮಗುರು

Update: 2025-07-22 22:38 IST

PHOTO | X.com/@custodiaTS

ಜೆರುಸಲೇಂ: ಗಾಝಾದಲ್ಲಿನ ಮಾನವೀಯ ಪರಿಸ್ಥಿತಿಯು ನೈತಿಕವಾಗಿ ಸ್ವೀಕಾರಾರ್ಹವಲ್ಲ ಮತ್ತು ಖಂಡಿತಾ ಸಮರ್ಥನೀಯವಲ್ಲ ಎಂದು ರೋಮನ್ ಕ್ಯಾಥೊಲಿಕ್ ಚರ್ಚ್‍ನ ಹಿರಿಯ ಧರ್ಮಗುರು ಪಿಯರ್ಬಟಿಸ್ಟಾ ಪಿಝಾಬಲ್ಲಾ ಹೇಳಿದ್ದಾರೆ.

ಯುದ್ಧದಿಂದ ಜರ್ಝರಿತಗೊಂಡ ಗಾಝಾ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಜೆರುಸಲೇಂನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ʼಚರ್ಚ್ ಹಾಗೂ ಸಂಪೂರ್ಣ ಕ್ರಿಶ್ಚಿಯನ್ ಸಮುದಾಯ ಯಾವತ್ತೂ ಗಾಝದ ಜನರನ್ನು ಬೆಂಬಲಿಸುತ್ತದೆ. ಮುಂದುವರಿದಿರುವ ಯುದ್ಧವು ಗಾಝಾದ ಸಂಪೂರ್ಣ ಜನಸಮುದಾಯದ ಮೇಲೆ ಪರಿಣಾಮ ಬೀರಿದೆ. ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಗಾಝಾದಲ್ಲಿ ಇಸ್ರೇಲ್ ಸರಕಾರದ ಯುದ್ಧನೀತಿ ಖಂಡಿತಾ ಸ್ವೀಕಾರಾರ್ಹವಲ್ಲ' ಎಂದು ಹೇಳಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News