×
Ad

ಇಬ್ರಾಹೀಂ ರಯೀಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಕೂಡಲೇ ಬೆಂಕಿ ಹತ್ತಿಕೊಂಡಿತ್ತು, ದಾಳಿಯ ಲಕ್ಷಣಗಳಿಲ್ಲ: ಇರಾನ್ ಸೇನೆ

Update: 2024-05-24 16:36 IST

 ಇಬ್ರಾಹೀಂ ರಯೀಸಿ | PC : PTI 

ಟೆಹರಾನ್: ಇರಾನಿನ ದಿವಂಗತ ಅಧ್ಯಕ್ಷ ಇಬ್ರಾಹೀಂ ರಯೀಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪರ್ವತಕ್ಕೆ ಢಿಕ್ಕಿ ಹೊಡೆದ ಬಳಿಕ ತಕ್ಷಣ ಅದಕ್ಕೆ ಬೆಂಕಿ ಹತ್ತಿಕೊಂಡಿತ್ತು ಮತ್ತು ದಾಳಿಯ ಯಾವುದೇ ಚಿಹ್ನೆಗಳು ಕಂಡು ಬರುತ್ತಿಲ್ಲ ಎಂದು ಸೇನೆಯ ತನಿಖಾಧಿಕಾರಿಗಳನ್ನು ಉಲ್ಲೇಖಿಸಿ ಸರಕಾರಿ ಮಾಧ್ಯಮವು ವರದಿ ಮಾಡಿದೆ.

ಅಪಘಾತದ ಕುರಿತು ತನಿಖೆಯ ಉಸ್ತುವಾರಿ ವಹಿಸಿರುವ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್‌ನ್ ಹೇಳಿಕೆಯನ್ನು ಗುರುವಾರ ತಡರಾತ್ರಿ ಸರಕಾರಿ ದೂರದರ್ಶನವು ಪ್ರಸಾರ ಮಾಡಿದೆ. ಅಪಘಾತದ ಕುರಿತು ಮೊದಲ ಹೇಳಿಕೆಯು ಯಾರ ವಿರುದ್ಧವೂ ಆರೋಪವನ್ನು ಹೊರಿಸಿಲ್ಲ,ಆದರೆ ಇನ್ನಷ್ಟು ತನಿಖೆಯ ಬಳಿಕ ಹೆಚ್ಚಿನ ವಿವರಗಳು ಬೆಳಕಿಗೆ ಬರಲಿವೆ ಎಂದು ತಿಳಿಸಿದೆ.

ರವಿವಾರ ಸಂಭವಿಸಿದ್ದ ಹೆಲಿಕಾಪ್ಟರ್ ಅಪಘಾತದಲ್ಲಿ ರಯೀಸಿ ಜೊತೆಗೆ ದೇಶದ ವಿದೇಶಾಂಗ ಸಚಿವರು ಮತ್ತು ಇತರ ಆರು ಜನರು ಮೃತಪಟ್ಟಿದ್ದರು.

ಪತನಕ್ಕೂ ಮುನ್ನ ನಿಯಂತ್ರಣ ಗೋಪುರ ಮತ್ತು ಹೆಲಿಕಾಪ್ಟರ್ ಸಿಬ್ಬಂದಿಗಳ ನಡುವಿನ ಸಂವಹನದಲ್ಲಿ ಯಾವುದೇ ಅನುಮಾನಾಸ್ಪದ ಅಂಶಗಳಿಲ್ಲ. ಪತನಗೊಂಡ ಹೆಲಿಕಾಪ್ಟರ್ ಮತ್ತು ಅದರ ಜೊತೆಯಲ್ಲಿದ್ದ ಎರಡು ಹೆಲಿಕಾಪ್ಟರ್‌ಗಳ ನಡುವೆ ಕೊನೆಯ ಸಂವಹನವು ಅಪಘಾತಕ್ಕೆ ಸುಮಾರು 90 ಸೆಕೆಂಡ್‌ಗಳ ಮುನ್ನ ನಡೆದಿತ್ತು. ಹೆಲಿಕಾಪ್ಟರ್‌ಗೆ ಗುಂಡು ಹಾರಿಸಿದ ಯಾವುದೇ ಲಕ್ಷಣಗಳಿಲ್ಲ ಮತ್ತು ಅದರ ಹಾರಾಟದ ಮಾರ್ಗವು ಬದಲಾಗಿರಲಿಲ್ಲ ಎಂದೂ ಹೇಳಿಕೆಯು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News