×
Ad

ಗಾಝಾ ಗಡಿಯಲ್ಲಿ ಇಸ್ರೇಲಿ ಸಮುದಾಯದ ಮೇಲೆಯೇ ಬಾಂಬ್ ಹಾಕಿದ ಐಡಿಎಫ್ ಯುದ್ಧವಿಮಾನ!

Update: 2025-04-16 20:48 IST

PC : NDTV 

ಜೆರುಸಲೇಂ: ದಕ್ಷಿಣ ಗಾಝಾ ಗಡಿಯಲ್ಲಿ ಇಸ್ರೇಲ್ ಸಮುದಾಯದವರು ವಾಸಿಸುತ್ತಿರುವ ನಿರ್ ಇಝಾಕ್ ಪ್ರದೇಶದ ಮೇಲೆಯೇ ಇಸ್ರೇಲ್ ವಾಯುಪಡೆಯ ಯುದ್ಧವಿಮಾನ ಬುಧವಾರ ಬಾಂಬ್ ಹಾಕಿರುವುದಾಗಿ ವರದಿಯಾಗಿದೆ.

ಗಾಝಾ ಪಟ್ಟಿಯಲ್ಲಿ ಕಾರ್ಯಾಚರಣೆಗೆ ತೆರಳುತ್ತಿದ್ದ ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಯುದ್ಧವಿಮಾನ ತಾಂತ್ರಿಕ ದೋಷದಿಂದಾಗಿ ಗಾಝಾ ಗಡಿಯಿಂದ 2 ಕಿ.ಮೀ ದೂರವಿರುವ ನಿರ್ ಇಝಾಕ್ ಪ್ರದೇಶದ ಮೇಲೆ ಬಾಂಬ್ ಹಾಕಿದೆ. ಅದೃಷ್ಟವಶಾತ್ ಬಯಲು ಪ್ರದೇಶಕ್ಕೆ ಬಾಂಬ್ ಅಪ್ಪಳಿಸಿದ ಕಾರಣ ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಇಸ್ರೇಲ್ ಸೇನೆ ಹೇಳಿದೆ.

ಎರಡು ತಿಂಗಳ ಕದನ ವಿರಾಮವನ್ನು ಕೊನೆಗೊಳಿಸಿದ್ದ ಇಸ್ರೇಲ್ ಮಿಲಿಟರಿ ಮಾರ್ಚ್ 18ರಿಂದ ಗಾಝಾದಲ್ಲಿ ಮಿಲಿಟರಿ ಕಾರ್ಯಾಚರಣೆ ಪುನರಾರಂಭಿಸಿದೆ.

ಈ ಮಧ್ಯೆ, ಗಾಝಾ ಪಟ್ಟಿಯ ಮೇಲಿನ ದಾಳಿಯನ್ನು ಇಸ್ರೇಲ್ ಮಿಲಿಟರಿ ಮುಂದುವರಿಸಿದ್ದು ಖಾನ್ ಯೂನಿಸ್ ನಗರದ ಮವಾಸಿ ಪ್ರದೇಶದಲ್ಲಿನ ಆಸ್ಪತ್ರೆಯ ಆವರಣಕ್ಕೆ ಬುಧವಾರ ನಡೆದ ವೈಮಾನಿಕ ದಾಳಿಯಲ್ಲಿ ಒಬ್ಬ ವೈದ್ಯಕೀಯ ಸಿಬ್ಬಂದಿ ಮೃತಪಟ್ಟಿದ್ದು ಇತರ 9 ಮಂದಿ ಗಾಯಗೊಂಡಿರುವುದಾಗಿ ಗಾಝಾದ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಿಖರ ಮಾಹಿತಿಯ ಹಿನ್ನೆಲೆಯಲ್ಲಿ, ಆಸ್ಪತ್ರೆಯ ಆವರಣದಲ್ಲಿ ಕಾರ್ಯಾಚರಿಸುತ್ತಿದ್ದ ಹಮಾಸ್ ದಳದ ಮುಖ್ಯಸ್ಥ ಹಾಗೂ ಕಮಾಂಡರ್ ರನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲಿ ಮಿಲಿಟರಿಯ ವಕ್ತಾರರನ್ನು ಉಲ್ಲೇಖಿಸಿ ಕ್ಸಿನ್‍ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News