×
Ad

ಅಮೆರಿಕ| ಮಸೀದಿ ಎದುರು ಗುಂಡಿಕ್ಕಿ ಇಮಾಮ್ ಹತ್ಯೆ: ದಾಳಿಕೋರರು ಪರಾರಿ

Update: 2024-01-04 13:52 IST

ಇಮಾಂ ಹಸನ್ ಶರೀಫ್ (Photo: Facebook)

ನ್ಯೂಯಾರ್ಕ್: ಬುಧವಾರ ನ್ಯೂ ಜೆರ್ಸಿಯ ಇಮಾಮ್ ಒಬ್ಬರನ್ನು ಬಂದೂಕುಧಾರಿಗಳು ಗುಂಡಿಟ್ಟು ಹತ್ಯೆಗೈದಿದ್ದಾರೆ. ದಾಳಿಕೋರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ನ್ಯೂಯಾರ್ಕ್ ನ ಮಸ್ಜಿದ್ ಮುಹಮ್ಮದ್ ಮಸೀದಿಯ ಬಳಿ ಬುಧವಾರ ಬೆಳಗ್ಗೆ 6 ಗಂಟೆಯ ಹೊತ್ತಿಗೆ ಇಮಾಂ ಹಸನ್ ಶರೀಫ್ ಅವರಿಗೆ ದುಷ್ಕರ್ಮಿಗಳು ಹಲವು ಬಾರಿ ಗುಂಡು ಹಾರಿಸಿದ್ದಾರೆ ಎಂದು ಎಸೆಕ್ಸ್ ಕೌಂಟಿ ಪ್ರಾಸಿಕ್ಯೂಟರ್ ಟೆಡ್ ಸ್ಟೀಫನ್ಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.

ಮೃತ ಶರೀಫ್ ‍ಸ್ಥಳೀಯ ಮಸೀದಿಯಲ್ಲಿ ಕಳೆದ ಐದು ವರ್ಷಗಳಿಂದ ಇಮಾಂ ಆಗಿದ್ದರು ಎಂದು ನ್ಯೂಯಾರ್ಕ್ ಸಾರ್ವಜನಿಕ ಸುರಕ್ಷತಾ ನಿರ್ದೇಶಕ ಫ್ರಿಟ್ಝ್ ಫ್ರೇಗ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News