×
Ad

ಗಾಝಾದಲ್ಲಿ ಕದನ ವಿರಾಮಕ್ಕೆ ಒತ್ತಾಯಿಸಿ ವಿಶ್ವಸಂಸ್ಥೆಯಲ್ಲಿ ಕರಡು ನಿರ್ಣಯ ಮಂಡನೆ : ಮತದಾನದಿಂದ ದೂರ ಉಳಿದ ಭಾರತ

Update: 2025-06-13 14:57 IST

Photo | Andrew Kelly/Reuters

ಹೊಸದಿಲ್ಲಿ : ಗಾಝಾದಲ್ಲಿ ಕದನ ವಿರಾಮಕ್ಕೆ ಒತ್ತಾಯಿಸಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಿದ ಕರಡು ನಿರ್ಣಯದ ಮೇಲಿನ ಮತದಾನದಿಂದ ಭಾರತ ಸೇರಿದಂತೆ 19 ದೇಶಗಳು ದೂರ ಉಳಿದಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಕ್ಷಣದ ಮತ್ತು ಶಾಶ್ವತ ಕದನ ವಿರಾಮವನ್ನು ಒತ್ತಾಯಿಸುವ ಹಾಗೂ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡುವ ಕುರಿತು ಸ್ಪೇನ್ ಮಂಡಿಸಿದ ನಿರ್ಣಯದ ಪರವಾಗಿ 149 ರಾಷ್ಟ್ರಗಳು ಮತಚಲಾಯಿಸಿದೆ.

ಯುದ್ಧ ತಂತ್ರವಾಗಿ ಗಾಝಾದ ನಾಗರಿಕರಿಗೆ ನೆರವು ನಿರಾಕರಣೆ ಮಾಡುವುದನ್ನು ನಿರ್ಣಯ ಖಂಡಿಸಿದೆ. ಇಸ್ರೇಲ್ ತಕ್ಷಣವೇ ಗಾಝಾ ಮೇಲಿನ ದಿಗ್ಬಂಧನವನ್ನು ತೆಗೆದುಹಾಕಬೇಕು ಮತ್ತು ನೆರವು ವಿತರಣೆಗಾಗಿ ಎಲ್ಲಾ ಗಡಿಗಳನ್ನು ಮುಕ್ತಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.

ಭಾರತ ಸೇರಿದಂತೆ 19 ರಾಷ್ಟ್ರಗಳು ಮತದಾನದಿಂದ ದೂರ ಉಳಿದರೆ, 12 ರಾಷ್ಟ್ರಗಳು ನಿರ್ಣಯದ ವಿರುದ್ಧ ಮತ ಚಲಾಯಿಸಿದೆ. ಮತದಾನದಿಂದ ದೂರ ಉಳಿದ ರಾಷ್ಟ್ರಗಳಲ್ಲಿ ಅಲ್ಬೇನಿಯಾ, ಕ್ಯಾಮರೂನ್, ಈಕ್ವೆಡಾರ್, ಇಥಿಯೋಪಿಯಾ, ಮಲಾವಿ, ಪನಾಮ, ದಕ್ಷಿಣ ಸುಡಾನ್ ಮತ್ತು ಟೋಗೊ ಸೇರಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News