×
Ad

ಭಾರತವು ಇರಾನ್ ಬದಲು ವೆನೆಝುವೆಲಾದಿಂದ ತೈಲ ಖರೀದಿಸಲಿದೆ: ಡೊನಾಲ್ಡ್ ಟ್ರಂಪ್

Update: 2026-02-01 13:59 IST

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)

ಹೊಸದಿಲ್ಲಿ: ಭಾರತ ಇರಾನ್‌ನಿಂದ ಕಚ್ಚಾ ತೈಲ ಖರೀದಿಸುವ ಬದಲು ವೆನೆಝುವೆಲಾದಿಂದ ತೈಲವನ್ನು ಆಮದು ಮಾಡಿಕೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಹೇಳಿದ್ದಾರೆ.

ಫ್ಲೋರಿಡಾಗೆ ಹೋಗುವ ಮಾರ್ಗ ಮಧ್ಯೆ ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ನಾವು ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದೇವೆ. ಭಾರತ ಇರಾನ್ ನಿಂದ ಖರೀದಿಸುವ ಬದಲು ವೆನೆಜುವೆಲಾದ ತೈಲವನ್ನು ಖರೀದಿಸಲಿದೆ ಎಂದು ಹೇಳಿದ್ದಾರೆ.

2019ರವರೆಗೆ ಭಾರತ ಇರಾನ್‌ನಿಂದ ತೈಲದ ಪ್ರಮುಖ ಖರೀದಿದಾರನಾಗಿತ್ತು. ಟೆಹ್ರಾನ್ ಮೇಲೆ ಅಮೆರಿಕ ಮತ್ತೆ ನಿರ್ಬಂಧಗಳನ್ನು ಹೇರಿದ ನಂತರ ಆಮದು ಗಮನಾರ್ಹವಾಗಿ ಕಡಿಮೆಯಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News