×
Ad

ಭಾರತದ ಸಾಕ್ಷ್ಯಚಿತ್ರ ʼಟು ಕಿಲ್‌ ಎ ಟೈಗರ್ʼ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನ

Update: 2024-01-23 23:04 IST

PC : IMDB

ಹೊಸದಿಲ್ಲಿ : ಭಾರತದ ‘ಟು ಕಿಲ್‌ ಎ ಟೈಗರ್‌’ ಚಿತ್ರವು 2024ರ ಆಸ್ಕರ್‌ನ ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗಕ್ಕೆ ನಾಮನಿರ್ದೇಶನಗೊಂಡಿದೆ. ದೌರ್ಜನ್ಯಕ್ಕೊಳಗಾದ ಮಗಳಿಗೆ ನ್ಯಾಯ ಕೊಡಿಸುವ ಹೋರಾಟದಲ್ಲಿ ತಂದೆಯ ಪಯಣ ಕುರಿತ ಸಾಕ್ಷ್ಯಚಿತ್ರ ಇದಾಗಿದೆ.

ದೆಹಲಿ ಮೂಲದ, ಈಗ ಕೆನಡಾದ ಟೊರೆಂಟೊದಲ್ಲಿ ನೆಲೆಸಿರುವ ನಿಶಾ ಪಹೂಜಾ ಅವರು To Kill a Tiger ಸಾಕ್ಷ್ಯಚಿತ್ರದ ನಿರ್ದೇಶಕರು. ಭಾರತದ ಗ್ರಾಮವೊಂದರಲ್ಲಿ 13 ವರ್ಷದ ಮಗಳನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಮೂವರು ಅಪರಾಧಿಗಳ ವಿರುದ್ಧ ನ್ಯಾಯಕ್ಕಾಗಿ ಹೋರಾಡುವ ತಂದೆಯ ಪಯಣ ಈ ಸಾಕ್ಷ್ಯ ಚಿತ್ರದಲ್ಲಿ ಎಳೆ ಎಳೆಯಾಗಿ ಚಿತ್ರಿತವಾಗಿದೆ.

‘ಮಗಳ ಮೇಲೆ ನಡೆದ ದೌರ್ಜನ್ಯದ ವಿರುದ್ಧ ತಂದೆ ರಂಜಿತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಆರೋಪಿಗಳ ಬಂಧನವೂ ಆಗುತ್ತದೆ. ಆದರೆ ದೂರು ಹಿಂಪಡೆಯುವಂತೆ ಇಡೀ ಊರು ಹಾಗೂ ಮುಖಂಡರು ಕುಟುಂಬದ ಮೇಲೆ ಒತ್ತಡ ಹೇರುತ್ತಾರೆ. ಇವೆಲ್ಲದರ ನಡುವೆ ತನ್ನ ಮಗಳಿಗೆ ನ್ಯಾಯ ದೊರಕಿಸಿಕೊಡಲು ತಂದೆಯ ಹೋರಾಟದ ಪ್ರತಿ ಹಂತವನ್ನೂ ಇದರಲ್ಲಿ ದಾಖಲಿಸಲಾಗಿದೆ’ ಎಂದು To Kill a Tiger ಚಿತ್ರದ ಅಂತರ್ಜಾಲ ಪುಟದಲ್ಲಿ ವಿವರಿಸಲಾಗಿದೆ. ಈ ಸಾಕ್ಷ್ಯಚಿತ್ರವನ್ನು ಕಾರ್ನಿಲಿಯಾ ಪ್ರನ್ಸಿಪೆ ಮತ್ತು ಡೇವಿಡ್ ಒಪ್ಪೆನ್‌ಹೀಮ್‌ ನಿರ್ಮಾಣ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News