×
Ad

ಆ್ಯಪಲ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಭಾರತ ಮೂಲದ ಸಬಿಹ್ ಖಾನ್ ನೇಮಕ

Update: 2025-07-09 13:21 IST

ಸಬಿಹ್ ಖಾನ್ 

ಕ್ಯುಪರ್ಟಿನೋ(ಕ್ಯಾಲಿಫೋರ್ನಿಯ): ವಿಶ್ವದ ಮುಂಚೂಣಿ ತಾಂತ್ರಿಕ ಸಂಸ್ಥೆಯಾದ ಆ್ಯಪಲ್, ತನ್ನ ಮುಂದಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (COO) ಭಾರತ ಮೂಲದ ಸಬಿಹ್ ಖಾನ್ ಅವರನ್ನು ನೇಮಕ ಮಾಡಿರುವುದಾಗಿ ಮಂಗಳವಾರ ಘೋಷಿಸಿದೆ. ಈ ನೇಮಕಾತಿಯು ಸಂಸ್ಥೆಯ ದೀರ್ಘಕಾಲಿಕ ಯೋಜನೆಯ ಭಾಗವಾಗಿದ್ದು, ಖಾನ್ ಅವರು ಈ ತಿಂಗಳ ಅಂತ್ಯದೊಳಗೆ ಅಧಿಕೃತವಾಗಿ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.

ಪ್ರಸ್ತುತ ಆ್ಯಪಲ್ ನ ಕಾರ್ಯಾಚರಣೆಗಳ ಹಿರಿಯ ಉಪಾಧ್ಯಕ್ಷರಾಗಿರುವ ಸಬಿಹ್ ಖಾನ್, ಸಂಸ್ಥೆಯಲ್ಲಿ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ. 1995ರಲ್ಲಿ ಆ್ಯಪಲ್ ನ ಪ್ರೊಕ್ಯೂರ್ಮೆಂಟ್ ವಿಭಾಗದಲ್ಲಿ ತಮ್ಮ ವೃತ್ತಿ ಪ್ರಯಾಣ ಆರಂಭಿಸುವ ಮೊದಲು ಅವರು ಜಿಇ ಪ್ಲಾಸ್ಟಿಕ್ಸ್‌ ನಲ್ಲಿ ಅಪ್ಲಿಕೇಶನ್ ಡೆವಲಪ್ಮೆಂಟ್ ಎಂಜಿನಿಯರ್ ಮತ್ತು ಪ್ರಮುಖ ತಾಂತ್ರಿಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.

“ಸಬಿಹ್ ಖಾನ್ ಅವರು ತಮ್ಮ ದೀರ್ಘಕಾಲೀನ ಅನುಭವ, ತಂತ್ರಜ್ಞಾನದ ಅರಿವು ಮತ್ತು ಕಾರ್ಯನಿರ್ವಹಣೆಯ ಅನುಭವಗಳಿಂದ ಆ್ಯಪಲ್ ನ ಮುಂದಿನ ಹಂತದ ಅಭಿವೃದ್ಧಿಗೆ ಸದೃಢ ನಾಯಕತ್ವ ಒದಗಿಸಲಿದ್ದಾರೆ”, ಎಂದು ಆಪಲ್ ತನ್ನ ಅಧಿಕೃತ ಹೇಳಿಕೆಯಲ್ಲಿ ವಿವರಿಸಿದೆ.

ಸಿಒಒ ಆಗಿ ಸೇವೆ ಸಲ್ಲಿಸಿದ್ದ ಜೆಫ್ ವಿಲಿಯಮ್ಸ್ ಅವರು 2025ರ ಕೊನೆವರೆಗೆ ಆಪಲ್ ನ ಸಿಇಒ ಟಿಮ್ ಕುಕ್ ಅವರಿಗೆ ವರದಿ ಮಾಡಲಿದ್ದಾರೆ. ವಿಲಿಯಮ್ಸ್ ಅವರು ವಿನ್ಯಾಸ ವಿಭಾಗ ಹಾಗೂ ಆಪಲ್ ವಾಚ್ ಅಭಿವೃದ್ಧಿಗೆ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಇತ್ತೀಚೆಗೆ ನಿರ್ವಹಿಸುತ್ತಿದ್ದುರು. ಅವರು ನಿವೃತ್ತಿಯಾದ ಬಳಿಕ ಈ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವವರು ನೇರವಾಗಿ ಸಿಇಒಗೆ ವರದಿ ಮಾಡಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News