×
Ad

ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಹೈದರಾಬಾದ್‌ ಮೂಲದ ವಿದ್ಯಾರ್ಥಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2024-04-09 11:46 IST

ಮುಹಮ್ಮದ್‌ ಅಬ್ದುಲ್‌ ಅರ್ಫಾತ್‌ (Photo:X)

ಹೊಸದಿಲ್ಲಿ: ಅಮೆರಿಕಾದ ಕ್ಲೀವ್‌ಲ್ಯಾಂಡ್‌ ವಿವಿಯಲ್ಲಿ ಸ್ನಾತ್ತಕೋತ್ತರ ಶಿಕ್ಷಣಕ್ಕಾಗಿ ಕಳೆದ ವರ್ಷದ ಮೇ ತಿಂಗಳಿನಲ್ಲಿ ತೆರಳಿದ್ದ ಹಾಗೂ ಕಳೆದ ಮೂರು ವಾರಗಳಿಂದ ನಾಪತ್ತೆಯಾಗಿದ್ದ ಹೈದರಾಬಾದ್‌ ಮೂಲದ 25 ವರ್ಷದ ಮುಹಮ್ಮದ್‌ ಅಬ್ದುಲ್‌ ಅರ್ಫಾತ್‌ ಶವವಾಗಿ ಪತ್ತೆಯಾಗಿದ್ದಾರೆ ಎಂದು ನ್ಯೂಯಾರ್ಕ್‌ ನಗರದ ಭಾರತೀಯ ಕಾನ್ಸುಲೇಟ್‌ ಮಾಹಿತಿ ನೀಡಿದೆ.

ಅರ್ಫತ್‌ ಕೊನೆಯ ಬಾರಿಗೆ ತನ್ನ ತಂದೆ ಮೊಹಮ್ಮದ್‌ ಸಲೀಂ ಜೊತೆಗೆ ಮಾರ್ಚ್‌ 7ರಂದು ಮಾತನಾಡಿದ್ದರು. ನಂತರ ಆತನ ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಮಾರ್ಚ್‌ 19 ರಂದು ಸಲೀಂಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಅರ್ಫಾತ್‌ನನ್ನು ಡ್ರಗ್ಸ್‌ ಜಾಲದ ಜನರು ಅಪಹರಿಸಿದ್ದಾರೆಂದು ಹೇಳಿ 1200 ಡಾಲರ್‌ಗೆ ಬೇಡಿಕೆಯಿರಿಸಿದ್ದ. ಆದರೆ ಆತ ಮಗನೊಂದಿಗೆ ಮಾತನಾಡಲು ಅವಕಾಶ ನೀಡಿರಲಿಲ್ಲ ಎಂದು ಸಲೀಂ ಹೇಳಿದ್ದರು

ಈ ವರ್ಷ ಅಮೆರಿಕಾದಲ್ಲಿ ಹಲವು ಭಾರತೀಯ ಮತ್ತು ಭಾರತೀಯ ಮೂಲದ ವಿದ್ಯಾರ್ಥಿಗಳ ಸಾವು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News