×
Ad

ವಿಮಾನ ಪತನ ; ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ ಆರು ಮಂದಿ ಮೃತ್ಯು

ಖಾಸಗಿ ವಿಮಾನ ಪತನಗೊಂಡು ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ ಆರು ಮಂದಿ ಮೃತಪಟ್ಟ ಘಟನೆ ಜಿಂಬಾಬ್ವೆಯಲ್ಲಿ ವರದಿಯಾಗಿದೆ

Update: 2023-10-02 18:04 IST

ಹರಾರೆ: ಖಾಸಗಿ ವಿಮಾನ ಪತನಗೊಂಡು ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ ಆರು ಮಂದಿ ಮೃತಪಟ್ಟ ಘಟನೆ ಜಿಂಬಾಬ್ವೆಯಲ್ಲಿ ವರದಿಯಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ತಿಳಿಸಿದೆ.

ಚಿನ್ನ, ಕಲ್ಲಿದ್ದಲು ಮತ್ತು ತಾಮ್ರವನ್ನು ಸಂಸ್ಕರಿಸುವ ರಿಯೋಜಿಮ್ ಗಣಿ ಕಂಪನಿಯ ಮಾಲಕ ಹರ್ಪಾಲ್ ರಾಂಧವಾ, ಅವರ ಮಗ ಮತ್ತು ಇತರ ನಾಲ್ವರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ರಿಯೊಜಿಮ್ ಒಡೆತನದ ಸೆಸ್ನಾ 206 ವಿಮಾನವು ಶುಕ್ರವಾರ ಸೆ.29 ರಂದು ಹರಾರೆಯಿಂದ ಜಿಂಬಾಬ್ಬೆಯ ಮುರೊವಾ ವಜ್ರದ ಗಣಿ ಕಡೆಗೆ ತೆರಳುತ್ತಿದ್ದಾಗ ಈ ದುರಂತ ಘಟನೆ ನಡೆದಿದೆ ಎಂದು ಜಿಂಬಾಬ್ಬೆಯ ʼಐ ಹರಾರೆʼ ವರದಿ ಮಾಡಿದೆ.

ರಿಯೊಝಿಮ್‌ನ ಒಡೆತನದಲ್ಲಿರುವ ಮುರೊವಾ ಡೈಮಂಡ್ಸ್ ಗಣಿ ಬಳಿ ವಿಮಾನ ಪತನಗೊಂಡಿದೆ. “ಮುರೋವಾ ಡೈಮಂಡ್ ಕಂಪನಿ (ರಿಯೊಜಿಮ್) ಮಾಲೀಕತ್ವದ ವಿಮಾನವು ಹರಾರೆಯಿಂದ ಗಣಿ ಪ್ರದೇಶಕ್ಕೆ ಬೆಳಿಗ್ಗೆ 6 ಗಂಟೆಗೆ ಹೊರಟಿತ್ತು. ಮಶಾವಾದಿಂದ 6 ಕಿಮೀ ದೂರದಲ್ಲಿ ಅಪಘಾತಕ್ಕೀಡಾಯಿತು” ಎಂದು ಅಪಘಾತದ ಬಗ್ಗೆ ರಿಯೊಜಿಮ್ ಅಧಿಕೃತವಾಗಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News