×
Ad

ದುಬೈ ಏರ್‌ಶೋನಲ್ಲಿ ತೇಜಸ್ ಯುದ್ಧವಿಮಾನ ಪತನ; ಪೈಲಟ್‌ ಮೃತ್ಯು

Update: 2025-11-21 16:23 IST

Photo credit: NDTV

ಹೊಸದಿಲ್ಲಿ: ದುಬೈನಲ್ಲಿ ನಡೆದ ವೈಮಾನಿಕ ಪ್ರದರ್ಶನದ ವೇಳೆ ತೇಜಸ್ ಯುದ್ಧವಿಮಾನ ಪತನಗೊಂಡು ಐಎಎಫ್ ಪೈಲಟ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಯುದ್ಧ ವಿಮಾನ ಪತನಗೊಂಡ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದೆ ಎಂದು NDTV ವರದಿ ಮಾಡಿದೆ.

ಭಾರತದ ಎಚ್‌ಎಎಲ್ ತೇಜಸ್ ಯುದ್ಧವಿಮಾನ ಸ್ಥಳೀಯ ಸಮಯ ಮಧ್ಯಾಹ್ನ 2.10ರ ವೇಳೆಗೆ ನಿಯಂತ್ರಣ ತಪ್ಪಿ ನೆಲಕ್ಕಪ್ಪಳಿಸುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಪತನದ ತಕ್ಷಣ ಯುದ್ಧ ವಿಮಾನ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ದೂರದಿಂದಲೇ ಹೊತ್ತಿ ಉರಿಯುತ್ತಿದ್ದ ಜ್ವಾಲೆಗಳು ಮತ್ತು ದಟ್ಟವಾಗಿ ಹೊಗೆ ಆವರಿಸಿಕೊಂಡಿರುವುದು ವೀಡಿಯೊದಲ್ಲಿ ಕಂಡು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News