×
Ad

ಇಂಡೊನೇಶ್ಯಾ: ನೌಕೆಗೆ ಬೆಂಕಿ; ಕನಿಷ್ಠ 5 ಮಂದಿ ಮೃತ್ಯು

Update: 2025-07-20 22:55 IST

Image: BASARNAS/AP/picture alliance

ಜಕಾರ್ತ, ಜು.20: ಇಂಡೊನೇಶ್ಯಾದ ತಲಿಸೆಯ್ ದ್ವೀಪದ ಸಮೀಪ 280 ಜನರಿದ್ದ ನೌಕೆಯಲ್ಲಿ ಬೆಂಕಿ ದುರಂತ ಸಂಭಂವಿಸಿದ್ದು ಗರ್ಭಿಣಿ ಮಹಿಳೆ ಸಹಿತ ಕನಿಷ್ಠ 5 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ತಲೌಡು ದ್ವೀಪದಿಂದ ಮನಾಡೊ ದ್ವೀಪದತ್ತ ಸಾಗುತ್ತಿದ್ದ `ಕೆಎಂ ಬಾರ್ಸೆಲೋನಾ 5' ನೌಕೆ ಉತ್ತರ ಸುಲಾವೆಸಿ ಕರಾವಳಿ ತೀರದ ಬಳಿ ಸಾಗುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದ್ದು ಬಲವಾಗಿ ಬೀಸುತ್ತಿದ್ದ ಗಾಳಿಯಿಂದಾಗಿ ಕ್ಷಿಪ್ರವಾಗಿ ಬೆಂಕಿಯ ಜ್ವಾಲೆ ಮತ್ತು ಹೊಗೆಯ ಕಾರ್ಮೋಡ ನೌಕೆಯನ್ನು ಆವರಿಸಿದೆ. ಗಾಬರಿಗೊಂಡ ಪ್ರಯಾಣಿಕರು ನೌಕೆಯಿಂದ ನೀರಿಗೆ ಹಾರುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News