×
Ad

ಇಂಡೋನೇಶ್ಯ : 3 ರೋಹಿಂಗ್ಯಾ ನಿರಾಶ್ರಿತರ ಮೃತದೇಹ ಪತ್ತೆ

Update: 2024-03-24 22:47 IST

ಜಕಾರ್ತ: ಇಂಡೊನೇಶ್ಯಾದ ಅಸೆಹ್ ಪ್ರಾಂತದ ಬಳಿ ಗುರುವಾರ ರೊಹಿಂಗ್ಯಾ ನಿರಾಶ್ರಿತರಿದ್ದ ದೋಣಿಯೊಂದು ಸಮುದ್ರದಲ್ಲಿ ಮುಳುಗಿದ್ದ ಪ್ರಕರಣದಲ್ಲಿ 75 ಮಂದಿಯನ್ನು ರಕ್ಷಿಸಲಾಗಿದೆ. ಆದರೆ ಮೂವರು ಮೃತಪಟ್ಟಿದ್ದಾರೆ ಎಂದು ಇಂಡೊನೇಶ್ಯದ ಅಧಿಕಾರಿಗಳು ಹೇಳಿದ್ದಾರೆ.

ಬಾಂಗ್ಲಾದೇಶದಿಂದ ಹೊರಟಿದ್ದ ನಿರಾಶ್ರಿತರಿದ್ದ ದೋಣಿ ಇಂಡೊನೇಶ್ಯಾ ಬಳಿ ಸಮುದ್ರದಲ್ಲಿ ಮುಳುಗಿತ್ತು. ದೋಣಿಯಲ್ಲಿ ಎಷ್ಟು ಮಂದಿಯಿದ್ದರು ಎಂಬುದು ದೃಢಪಟ್ಟಿಲ್ಲ. ದೋಣಿ ಮುಳುಗಿದ ಮಾಹಿತಿ ತಿಳಿದೊಡನೆ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ 44 ಪುರುಷರು, 22 ಮಹಿಳೆಯರು ಹಾಗೂ 9 ಮಕ್ಕಳ ಸಹಿತ 75 ಜನರನ್ನು ರಕ್ಷಿಸಿತ್ತು. ಇನ್ನೂ ಕೆಲವರು ನಾಪತ್ತೆಯಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿತ್ತು. ಶನಿವಾರ ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆಯ ಮೃತದೇಹ ನೀರಿನಲ್ಲಿ ಪತ್ತೆಯಾಗಿದ್ದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಅಂತ್ಯಗೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ರವಿವಾರ ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News