×
Ad

ಪನ್ನೂನ್ ಹತ್ಯೆ ಯತ್ನದ ಬಗ್ಗೆ ತನಿಖೆ ಆರಂಭ: ಸಂಜಯ್ ವರ್ಮ

Update: 2023-11-27 22:41 IST

 ಸಂಜಯ್ ಕುಮಾರ್ ವರ್ಮ | Photo; ANI 

ಒಟ್ಟಾವ: ಅಮೆರಿಕವು ಕಾನೂನುಬದ್ಧವಾಗಿ ಪ್ರಸ್ತುತ ಪಡಿಸಬಹುದಾದ ಮಾಹಿತಿಗಳನ್ನು ಒದಗಿಸಿದ ಕಾರಣ ಖಾಲಿಸ್ತಾನ್ ಪ್ರತ್ಯೇಕತಾವಾದಿ ಮುಖಂಡ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆ ಪ್ರಯತ್ನದ ಬಗ್ಗೆ ಭಾರತ ತನಿಖೆ ನಡೆಸುತ್ತಿದೆ ಎಂದು ಕೆನಡಾಕ್ಕೆ ಭಾರತದ ಹೈಕಮಿಷರ್ ಸಂಜಯ್ ಕುಮಾರ್ ವರ್ಮ ಹೇಳಿದ್ದಾರೆ.

ಇತ್ತೀಚಿನ ಪ್ರಕರಣವನ್ನು ಗಮನಿಸಿದರೆ, ಭಾರತದ ವಿರುದ್ಧ ಪತ್ರಿಕೆಯೊಂದರಲ್ಲಿ ಕೆಲವು ಆರೋಪಗಳನ್ನು ಹೊರಿಸಲಾಗಿದೆ ಮತ್ತು ಅಮೆರಿಕ ನಮಗೆ ಮಾಹಿತಿ ನೀಡಿದೆ. ಆದ್ದರಿಂದ ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಆದರೆ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಕೆನಡಾ ನಮ್ಮ ವಿರುದ್ಧ ಆರೋಪ ಮಾತ್ರ ಹೊರಿಸುತ್ತಿದ್ದು ಆರೋಪಕ್ಕೆ ಪೂರಕವಾದ ಯಾವುದೇ ಮಾಹಿತಿ ಒದಗಿಸುತ್ತಿಲ್ಲ' ಎಂದವರು ಹೇಳಿರುವುದಾಗಿ ಸಿಟಿವಿ ನ್ಯೂಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News