×
Ad

ಆಕ್ರಮಣದ ಎದುರು ಮೌನವಾಗಿರಲು ಸಾಧ್ಯವಿಲ್ಲ : ಇರಾನ್

Update: 2024-08-07 22:06 IST

PC : NDTV

ಟೆಹ್ರಾನ್ : ತನ್ನ ಹಿತಾಸಕ್ತಿ ಮತ್ತು ಭದ್ರತೆಯ ವಿರುದ್ಧದ ಆಕ್ರಮಣದ ಎದುರು ಇರಾನ್ ಎಂದಿಗೂ ಮೌನವಾಗಿರುವುದಿಲ್ಲ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಷ್ಕಿಯಾನ್ ಬುಧವಾರ ಹೇಳಿದ್ದಾರೆ.

ಯುದ್ಧ, ಸಂಘರ್ಷವನ್ನು ತಪ್ಪಿಸಲು ಇರಾನ್ ಆದ್ಯತೆ ನೀಡುತ್ತದೆ. ಆದರೆ ದೇಶದ ಹಿತಾಸಕ್ತಿ ಮತ್ತು ಭದ್ರತೆಗೆ ಸಮಸ್ಯೆ ಎದುರಾದಾಗ ಸುಮ್ಮನಿರಲು ಸಾಧ್ಯವಿಲ್ಲ ಎಂದವರು ಹೇಳಿರುವುದಾಗಿ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಮಧ್ಯೆ, ಮಧ್ಯಪ್ರಾಚ್ಯದ ಬಿಕ್ಕಟ್ಟು ಉಲ್ಬಣಿಸಬಾರದು ಎಂಬ ಸ್ಪಷ್ಟ ಸಂದೇಶವನ್ನು ಇರಾನ್ ಮತ್ತು ಇಸ್ರೇಲ್ ಗೆ ರವಾನಿಸಿರುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News