×
Ad

ಅತ್ಯಾಧುನಿಕ ಡ್ರೋನ್ ಅನಾವರಣಗೊಳಿಸಿದ ಇರಾನ್

Update: 2025-01-10 21:32 IST

ಟೆಹ್ರಾನ್: `ರೆಝ್ವಾನ್' ಎಂದು ಹೆಸರಿಸಲಾಗಿರುವ ಅತ್ಯಾಧುನಿಕ, ಆತ್ಮಹತ್ಯಾ ದಾಳಿ ನಡೆಸಬಲ್ಲ ಡ್ರೋನ್ ಅನ್ನು ಇರಾನ್‍ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್‍ಜಿಸಿ) ಪಶ್ಚಿಮ ಇರಾನ್‍ನಲ್ಲಿ ನಡೆದ ಮಿಲಿಟರಿ ಕವಾಯತಿನ ಸಂದರ್ಭ ಅನಾವರಣಗೊಳಿಸಿದೆ.

ಇದನ್ನು ತ್ವರಿತ ನಿಯೋಜನೆಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ನೆಲದ ಯುದ್ಧ ಹಾಗೂ ಹೊಂಚುದಾಳಿ ನಿಗ್ರಹ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತದೆ. 20 ನಿಮಿಷದಷ್ಟು ಕಾಲ ಹಾರಬಲ್ಲ ಡ್ರೋನ್ 20 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ರೆಝ್ವಾನ್ ಡ್ರೋನ್ ಮುಂಭಾಗದಲ್ಲಿ ಅಳವಡಿಸಲಾದ ಕ್ಯಾಮೆರಾವನ್ನು ಹೊಂದಿದ್ದು ಇದು ಸಕಾಲದಲ್ಲಿ ಗುರಿಗೆ ನಿಖರ ಪ್ರಹಾರ ನೀಡಲು ನೆರವಾಗುತ್ತದೆ. ಈ ಹೊಸ ತಂತ್ರಜ್ಞಾನವು ಇರಾನ್ ತನ್ನ ಮಿಲಿಟರಿ ಶಕ್ತಿಯನ್ನು ನವೀಕರಿಸಲು ನಡೆಸುವ ಪ್ರಯತ್ನಗಳನ್ನು ತೋರಿಸಿದ್ದು ಇಸ್ರೇಲ್ ಮತ್ತು ಪಾಶ್ಚಿಮಾತ್ಯ ದೇಶಗಳಿಗೆ ಸವಾಲಾಗಬಹುದು ಎಂದು ಮಾಧ್ಯಮಗಳು ವಿಶ್ಲೇಷಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News