×
Ad

ಇರಾನ್ ಉಡಾಯಿಸಿದ ಪ್ರತಿ 20 ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪೈಕಿ ಒಂದರ ತುದಿಯಲ್ಲಿ ಬಾಂಬ್ ಸಿಡಿತಲೆಗಳ ಗೊಂಚಲು ಅಳವಡಿಕೆ: ವರದಿ

Update: 2025-06-19 20:15 IST

PC : X \ @theinformant_x

ಟೆಹ್ರಾನ್/ಟೆಲ್ ಅವೀವ್: ಇಸ್ರೇಲ್‌ ನತ್ತ ಗುರುವಾರ ಇರಾನ್ ಉಡಾಯಿಸಿದ ಪ್ರತಿ 20 ಬ್ಯಾಲೆಸ್ಟಿಕ್ ಕ್ಷಿಪಣಿಗಳ ಪೈಕಿ ಒಂದು ಕ್ಷಿಪಣಿಯ ತುದಿಯು ಸಿಡಿತಲೆಗಳ ಗೊಂಚಲನ್ನು ಹೊಂದಿತ್ತು ಎಂದು ಇಸ್ರೇಲ್ ಸೇನೆಯ ಹೋಮ್ ಫ್ರಂಟ್ ಕಮಾಂಡ್ ಅನ್ನು ಉಲ್ಲೇಖಿಸಿ The Times of Israel ವರದಿ ಮಾಡಿದೆ.

ಇಂತಹ ಸಿಡಿತಲೆಗಳು ನೆಲಕ್ಕೆ ಅಪ್ಪಳಿಸುತ್ತಿದ್ದಂತೆಯೇ, ಸಿಡಿದು ಹೋಗಿ ಸಣ್ಣ ಸ್ಫೋಟಕಗಳನ್ನು ಚೆಲ್ಲಾಡುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ. ಇಂತಹ ಸ್ಫೋಟಕವೊಂದು ಅಝೋರ್‌ನಲ್ಲಿನ ಮನೆಯೊಂದಕ್ಕೆ ಅಪ್ಪಳಿಸಿ, ಅದಕ್ಕೆ ಹಾನಿಯನ್ನುಂಟು ಮಾಡಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

"ನಾವು ಬಹು ಸ್ವತಂತ್ರ ಗುರಿಗಳ ಮರುಪ್ರವೇಶ ವಾಹನ (Multiple Independently Targetable Reentry Vehicle) ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಹಾಗೆಯೇ, ಸಣ್ಣ ಯುದ್ಧ ಸಾಮಗ್ರಿಗಳೊಂದಿಗೆ ಇನ್ನಿತರ ಸ್ಫೋಟಕಗಳನ್ನು ಹೊಂದಿದ್ದು, ಇವುಗಳಿಂದಾಗಿ, ಒಂದೇ ಕ್ಷಿಪಣಿ ಹಲವು ಗುರಿಗಳನ್ನು ತಲುಪಬಲ್ಲದಾಗಿದೆ ಎಂದು ಇರಾನ್ ಹೇಳಿಕೊಂಡಿದೆ" ಎಂದು ದಿನಪತ್ರಿಕೆಯೊಂದರಲ್ಲಿ ಪತ್ರಕರ್ತರಾಗಿರುವವರೊಬ್ಬರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ‌.

"ನೆಲದ ಮೇಲೆ ಕಂಡು ಬರುವ ಯಾವುದೇ ಕ್ಷಿಪಣಿ ಅವಶೇಷಗಳ ಸಮೀಪ ತೆರಳಬಾರದು. ಅವು ಅಪಾಯಕಾರಿಯಾಗಿದ್ದು, ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದು ಇಸ್ರೇಲ್ ಸೇನೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ" ಎಂದು The Times of Israel ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News