×
Ad

ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ: ಟೆಲ್‍ಅವೀವ್‍ನಲ್ಲಿ ವ್ಯಾಪಕ ಹಾನಿ

Update: 2025-06-21 19:42 IST

PC : X \ @AshishSinghKiJi

ಜೆರುಸಲೇಂ: ಟೆಲ್‍ಅವೀವ್ ಸೇರಿದಂತೆ ಮಧ್ಯ ಮತ್ತು ದಕ್ಷಿಣ ಇಸ್ರೇಲನ್ನು ಗುರಿಯಾಗಿಸಿ ಶನಿವಾರ ಇರಾನ್ ಕನಿಷ್ಠ 5 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದ್ದು ವ್ಯಾಪಕ ಹಾನಿ ಸಂಭವಿಸಿರುವುದಾಗಿ ವರದಿಯಾಗಿದೆ.

ಟೆಲ್ ಅವೀವ್‍ನಲ್ಲಿ ಕಟ್ಟಡಗಳಿಂದ ಬೆಂಕಿ ಮತ್ತು ಹೊಗೆಯ ಕಾರ್ಮೋಡ ಆಗಸಕ್ಕೆ ವ್ಯಾಪಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇರಾನ್‍ನಿಂದ ಕ್ಷಿಪಣಿ ಉಡಾವಣೆಗೊಂಡ ಕಾರಣ ಶನಿವಾರ ಬೆಳಿಗ್ಗೆ 2:30 ಗಂಟೆಗೆ ಟೆಲ್ ಅವೀವ್ ಸೇರಿದಂತೆ ಮಧ್ಯ ಇಸ್ರೇಲಿನಲ್ಲಿ ಸೈರನ್ ಮೊಳಗಿಸಲಾಗಿದ್ದು ಕೆಲವು ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಕ್ಷಿಣ ಇಸ್ರೇಲ್‌ ನ ಮೇಲೆ ಇರಾನ್ 5 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದ್ದು ನಾಶ-ನಷ್ಟದ ಬಗ್ಗೆ ತಕ್ಷಣ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ಇಸ್ರೇಲಿ ಮಿಲಿಟರಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. ಈ ದಾಳಿಗೆ ಪ್ರತಿಯಾಗಿ ಶನಿವಾರ ಬೆಳಿಗ್ಗೆ ಸುಮಾರು 3 ಗಂಟೆಗೆ ಮಧ್ಯ ಇರಾನ್‌ ನ ಕ್ಷಿಪಣಿ ಸಂಗ್ರಹಣೆ ಮತ್ತು ಉಡಾವಣಾ ಮೂಲ ಸೌಕರ್ಯವನ್ನು ಗುರಿಯಾಗಿಸಿ ಸರಣಿ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಹೇಳಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News