×
Ad

ಇಸ್ರೇಲ್ ಪರ ಬೇಹುಗಾರಿಕೆ ಮಾಡಿದಾತನನ್ನು ಗಲ್ಲಿಗೇರಿಸಿದ ಇರಾನ್: ವರದಿ

Update: 2025-06-22 16:46 IST

ಸಾಂದರ್ಭಿಕ ಚಿತ್ರ | PC : freepik.com

ದುಬೈ: ಇಸ್ರೇಲ್‌ಗಾಗಿ ಬೇಹುಗಾರಿಕೆ ನಡೆಸಿದ ಮತ್ತು ಗುಪ್ತಚರ ಸಂಸ್ಥೆ ಮೊಸಾದ್‌ ಜೊತೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳಲು ಯತ್ನಿಸಿದ ಆರೋಪದ ಮೇಲೆ ಮಜೀದ್ ಮೊಸೇಬಿ ಎಂಬಾತನನ್ನು ಇರಾನ್‌ನಲ್ಲಿ ಗಲ್ಲಿಗೇರಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಮೀಝಾನ್ ರವಿವಾರ ವರದಿ ಮಾಡಿದೆ.

ಮೊಸೇಬಿಯನ್ನು ಯಾವಾಗ ಬಂಧಿಸಲಾಗಿದೆ ಎಂಬ ಬಗ್ಗೆ ಮೀಝಾನ್ ವಿವರಿಸಲಿಲ್ಲ. ಕ್ರಿಮಿನಲ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ದೃಢಪಡಿಸಿದ ನಂತರ ಮಜೀದ್ ಮೊಸೇಬಿಯನ್ನು ರವಿವಾರ ಬೆಳಿಗ್ಗೆ ಗಲ್ಲಿಗೇರಿಸಲಾಗಿದೆ ಎಂದು ಮೀಝಾನ್ ವೆಬ್‌ಸೈಟ್‌ ವರದಿ ಮಾಡಿದೆ.

ಮೇ ತಿಂಗಳಲ್ಲಿ ಇರಾನಿನ ಅಧಿಕಾರಿಗಳು ಮೊಸಾದ್ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಮೊಹ್ಸೆನ್ ಲಂಗರ್ನೆಶಿನ್ ಪೆಡ್ರಾಮ್ ಎಂಬಾತನನ್ನು ಗಲ್ಲಿಗೇರಿಸಿದ್ದರು.

ಜೂನ್ 13ರಂದು ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ ನಂತರ ಬೇಹುಗಾರಿಕೆ ಆರೋಪದಲ್ಲಿ ಹಲವರನ್ನು ಇರಾನ್‌ನಲ್ಲಿ ಬಂಧಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News