IRGC ಗುಪ್ತಚರ ಘಟಕದ ಮುಖ್ಯಸ್ಥರಾಗಿ ಮಜೀದ್ ಖಡೆಮಿ ನೇಮಕ
Update: 2025-06-20 21:21 IST
PC | X /@PressTV
ಟೆಹ್ರಾನ್: ಇಸ್ಲಾಮಿಕ್ ರೆವಲ್ಯುಷನರಿ ಗಾರ್ಡ್ ಕಾಪ್ರ್ಸ್‍ನ(IRGC) ಗುಪ್ತಚರ ಘಟಕದ ನೂತನ ಮುಖ್ಯಸ್ಥರಾಗಿ ಬ್ರಿ|ಜ| ಮಜೀದ್ ಖಡೆಮಿ ನೇಮಕಗೊಂಡಿದ್ದಾರೆ ಎಂದು `ಟೆಹ್ರಾನ್ ಟೈಮ್ಸ್' ವರದಿ ಮಾಡಿದೆ.
ಗುಪ್ತಚರ ಘಟಕದ ಅಧ್ಯಕ್ಷರಾಗಿದ್ದ ಮುಹಮ್ಮದ್ ಕಝೇಮಿ ಇರಾನ್ ಮೇಲಿನ ಇಸ್ರೇಲಿ ದಾಳಿಯಲ್ಲಿ ಸಾವನ್ನಪ್ಪಿದ ನಂತರ ಈ ಬೆಳವಣಿಗೆ ನಡೆದಿದೆ. ಬ್ರಿ|ಜ| ಮಜೀದ್ ಖಡೇಮಿ ಈ ಹಿಂದೆ IRGCಯ ರಕ್ಷಣೆ ಮತ್ತು ಗುಪ್ತಚರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು ಎಂದು ವರದಿ ತಿಳಿಸಿದೆ.