×
Ad

ಇಸ್ರೇಲ್ ನ ಹೈಫಾ ತೈಲ ಸಂಸ್ಕರಣಾಗಾರ, ಟೆಲ್ ಅವೀವ್ ಸಮೀಪದ ಸಂವಹನ ಕೇಂದ್ರದ ಮೇಲೆ ದಾಳಿ: ಇರಾನ್

Update: 2026-03-11 00:05 IST

ಸಾಂದರ್ಭಿಕ ಚಿತ್ರ | Photo Credit : gemini AI

ಟೆಹ್ರಾನ್: ಇಸ್ರೇಲ್‌ ನಲ್ಲಿನ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಲಾಗಿದೆ ಎಂದು ಇರಾನ್ ಹೇಳಿದೆ. ಈ ಕುರಿತು ಇರಾನ್‌ ನ ಖತಮ್ ಅಲ್-ಅನ್ಬಿಯಾ ಸಶಸ್ತ್ರ ಪಡೆಗಳ ಪ್ರಧಾನ ಕಚೇರಿಯ ವಕ್ತಾರರು ಮಂಗಳವಾರ ಹೇಳಿದ್ದಾರೆ.

ಉತ್ತರ ಇಸ್ರೇಲ್‌ ನ ಹೈಫಾದಲ್ಲಿರುವ ತೈಲ ಮತ್ತು ಅನಿಲ ಸಂಸ್ಕರಣಾಗಾರ ಹಾಗೂ ಇಂಧನ ಸಂಗ್ರಹ ಟ್ಯಾಂಕ್‌ ಗಳನ್ನು ಗುರಿಯಾಗಿಸಿ ಡ್ರೋನ್ ಗಳನ್ನು ಬಳಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಟೆಲ್ ಅವೀವ್ ಸಮೀಪದಲ್ಲಿರುವ ಉಪಗ್ರಹ ಸಂವಹನ ಕೇಂದ್ರವನ್ನೂ ಇರಾನ್ ಪಡೆಗಳು ನಾಶಪಡಿಸಿದ್ದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇರಾನ್‌ ನ ತೈಲ ಡಿಪೋಗಳನ್ನು ಗುರಿಯಾಗಿಸಿಕೊಂಡಿದ್ದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ. ಇರಾನ್ ನಡೆಸಿದ ದಾಳಿಗಳ ‘33ನೇ ಅಲೆ’ ಸಮಯದಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ಇದಲ್ಲದೆ, ಉತ್ತರ ಇರಾಕ್‌ ನ ಕುರ್ದಿಶ್ ಪ್ರದೇಶದ ಹರಿರ್ ನೆಲೆಯಲ್ಲಿರುವ ಅಮೆರಿಕ ಸೇನೆಯ ಪ್ರಧಾನ ಕಚೇರಿಯ ಮೇಲೂ ಇರಾನ್ ಐದು ಕ್ಷಿಪಣಿಗಳನ್ನು ಹಾರಿಸಿದೆ ಎಂದು ವಕ್ತಾರರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News