×
Ad

ಇರಾನ್ ಶಾಲೆಯ ದಾಳಿಯಲ್ಲಿ ಅಮೆರಿಕದ ಪಾತ್ರವನ್ನು ಒಪ್ಪಿಕೊಂಡ ರಿಪಬ್ಲಿಕನ್ ಸೆನೆಟರ್

Update: 2026-03-10 23:58 IST

ರಿಪಬ್ಲಿಕನ್ ಸೆನೆಟರ್ ಜಾನ್ ಕೆನಡಿ (Image: X)

ವಾಷಿಂಗ್ಟನ್: ಫೆಬ್ರವರಿ 28ರಂದು ಇರಾನ್ ನ ಮಿನಾಬ್ ನಲ್ಲಿರುವ ಬಾಲಕಿಯರ ಶಾಲೆಯ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಅಮೆರಿಕದ ಪಾತ್ರವನ್ನು ರಿಪಬ್ಲಿಕನ್ ಸೆನೆಟರ್ ಜಾನ್ ಕೆನಡಿ ಒಪ್ಪಿಕೊಂಡಿದ್ದು ಇದೊಂದು ದೊಡ್ಡ ಪ್ರಮಾದ ಎಂದು ಹೇಳಿರುವುದಾಗಿ ವರದಿಯಾಗಿದೆ.

ಇರಾನ್ ನ ಶಾಲೆಯ ಮೇಲಿನ ದಾಳಿಗೆ ಅಮೆರಿಕದ ಪಡೆಗಳು ಕಾರಣವೆಂದು ಅಮೆರಿಕದ ಮಿಲಿಟರಿ ತನಿಖಾಧಿಕಾರಿಗಳು ನಂಬಿದ್ದಾರೆ ಎಂದು ವರದಿಯಾಗಿತ್ತು. ʼಇದು ಭಯಾನಕವಾಗಿತ್ತು. ನಾವು ತಪ್ಪು ಮಾಡಿದೆವು. ರಶ್ಯದಂತಹ ಇತರ ರಾಷ್ಟ್ರಗಳು ಇಂತಹ ವಿಷಯಗಳನ್ನು ಉದ್ದೇಶಪೂರ್ವಕವಾಗಿ ಮಾಡುತ್ತವೆ. ನಾವೆಂದೂ ಅದನ್ನು ಉದ್ದೇಶಪೂರ್ವಕವಾಗಿ ಮಾಡುವುದಿಲ್ಲ. ರಕ್ಷಣಾ ಸಚಿವಾಲಯ ಇದನ್ನು ತನಿಖೆ ನಡೆಸುತ್ತಿದೆ. ಕ್ಷಮಿಸಿ, ಅದು ಸಂಭವಿಸಿದೆ. ಇದಕ್ಕಾಗಿ ನಾನು ವಿಷಾದಿಸುತ್ತೇನೆ. ಇದು ತಪ್ಪು' ಎಂದು ಕೆನಡಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News