×
Ad

ಪ್ರಯಾಣಿಕನ ಫೋನ್ ನಲ್ಲಿ ಆಝಾನ್ ಅಲರಾಂ; ‘ಬಾಂಬ್ ಬೆದರಿಕೆ’ ಎಂದು ತಪ್ಪಾಗಿ ಗ್ರಹಿಸಿ ವಿಮಾನದಿಂದ ಕೆಳಗಿಳಿಸಿದ ಸೌತ್‌ವೆಸ್ಟ್ ಏರ್‌ಲೈನ್ಸ್‌!

Update: 2026-03-10 23:22 IST

Image credit: X/@bennyjohnson

ವಾಷಿಂಗ್ಟನ್: ಸೌತ್‌ವೆಸ್ಟ್ ಏರ್‌ಲೈನ್ಸ್‌ನ ವಿಮಾನದಲ್ಲಿದ್ದ ಪ್ರಯಾಣಿಕನ ಫೋನ್ ನಲ್ಲಿ ಆಝಾನ್ ಅಲರಾಂ ಆಗಿದ್ದನ್ನು ‘ಬಾಂಬ್ ಬೆದರಿಕೆ’ ಎಂದು ತಪ್ಪಾಗಿ ಅರ್ಥೈಸಿದ ಪರಿಣಾಮ, ಆತನನ್ನು ವಿಮಾನದಿಂದ ಕೆಳಗಿಳಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ.

ಫ್ಲೋರಿಡಾಕ್ಕೆ ತೆರಳುತ್ತಿದ್ದ ವಿಮಾನವನ್ನು ಈ ಘಟನೆಯ ಬಳಿಕ ಜಾರ್ಜಿಯಾ ರಾಜ್ಯದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ವಿಮಾನದಲ್ಲಿದ್ದ ಕೆಲ ಪ್ರಯಾಣಿಕರು ಆ ವ್ಯಕ್ತಿಯ ಫೋನ್ ಅಲರಾಂ ಅನ್ನು ತಪ್ಪಾಗಿ ಗ್ರಹಿಸಿ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡರು.

ವಿಮಾನವನ್ನು ಭೂಸ್ಪರ್ಶ ಮಾಡಿಸಿದ ಬಳಿಕ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಯಾವುದೇ ರೀತಿಯ ಬೆದರಿಕೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಬಳಿಕ ಈ ಘಟನೆ ಸಂಪೂರ್ಣವಾಗಿ ‘ತಪ್ಪು ಗ್ರಹಿಕೆ’ಯಿಂದ ಸಂಭವಿಸಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News