ಇರಾನ್ ಪರಿಸ್ಥಿತಿ ತಿಳಿಗೊಳ್ಳುವವರೆಗೆ ಕೆಲವು ದೇಶಗಳ ಮೇಲಿನ ತೈಲ ನಿರ್ಬಂಧ ತೆರವು: ಟ್ರಂಪ್
ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್: ಇರಾನ್ನೊಂದಿಗಿನ ಯುದ್ದ ಕೊನೆಗೊಳ್ಳುವ ತನಕ ಅಮೆರಿಕವು ಕೆಲವು ರಾಷ್ಟ್ರಗಳ ತೈಲ ಮಾರಾಟದ ಮೇಲಿನ ನಿಷೇಧವನ್ನು ತೆರವುಗೊಳಿಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಬೆಲೆಗಳನ್ನು ಕಡಿಮೆ ಮಾಡಲು ನಾವು ಕೆಲವು ತೈಲ ಸಂಬಂಧಿತ ನಿರ್ಬಂಧಗಳನ್ನು ಸಹ ಮನ್ನಾ ಮಾಡುತ್ತೇವೆ. ಕೆಲವು ದೇಶಗಳ ಮೇಲೆ ನಾವು ನಿರ್ಬಂಧ ಹೇರಿದ್ದೇವೆ. ಆದರೆ ಪರಿಸ್ಥಿತಿ ಸುಧಾರಿಸುವವರೆಗೆ ಈ ನಿರ್ಬಂಧವನ್ನು ತೆರವುಗೊಳಿಸುತ್ತೇವೆ. ಅಗತ್ಯ ಬಿದ್ದರೆ ಅಮೆರಿಕದ ನೌಕಾಪಡೆ ಮತ್ತು ಅದರ ಪಾಲುದಾರರು ಜಲಸಂಧಿಯ ಮೂಲಕ ಟ್ಯಾಂಕರ್ಗಳನ್ನು ಬೆಂಗಾವಲು ಮಾಡುತ್ತಾರೆ. ನಾವು ಇದನ್ನು ಮಾಡಿದರೆ ತೈಲ ಬೆಲೆಗಳು ಕಡಿಮೆಯಾಗುತ್ತದೆ ಎಂದು ನನಗೆ ತಿಳಿದಿದೆ. ಇರಾನ್ ಪರಮಾಣು ಕ್ಷಿಪಣಿ ಪಡೆಯಬಾರದು ಎಂಬ ಏಕೈಕ ಉದ್ದೇಶ ನಮ್ಮದಾಗಿದೆ. ದೀರ್ಘಾವಧಿಯಲ್ಲಿ ಇರಾನ್ ನ ಬೆದರಿಕೆಯಿಲ್ಲದೆ ತೈಲ ಸರಬರಾಜು ಸುರಕ್ಷಿತವಾಗಿರುತ್ತದೆ. ಈ ಬೆದರಿಕೆಯನ್ನು ಶಾಶ್ವತವಾಗಿ ಕೊನೆಗೊಳಿಸುತ್ತೇವೆ' ಎಂದು ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.