×
Ad

ಪುಟಿನ್ ಗೆ ಟ್ರಂಪ್ ದೂರವಾಣಿ ಕರೆ; ಇರಾನ್ ಯುದ್ಧ ಶೀಘ್ರ ಕೊನೆಗೊಳಿಸುವ ಬಗ್ಗೆ ಪ್ರಸ್ತಾಪ

Update: 2026-03-10 22:31 IST

Photo : gemini AI

ಮಾಸ್ಕೋ: ಅಮೆರಿಕ ಅಧ್ಯಕ್ಷ ಟ್ರಂಪ್ ಸೋಮವಾರ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗೆ ದೂರವಾಣಿ ಕರೆ ಮಾಡಿದ್ದು ಇರಾನ್ ನಲ್ಲಿ ಈಗ ನಡೆಯುತ್ತಿರುವ ಯುದ್ದವನ್ನು ತ್ವರಿತವಾಗಿ ಇತ್ಯರ್ಥಗೊಳಿಸುವ ಉದ್ದೇಶದ ಹಲವು ಸಲಹೆಗಳನ್ನು ಹಂಚಿಕೊಂಡರು ಎಂದು ರಶ್ಯ ಅಧ್ಯಕ್ಷರ ಕಚೇರಿ ಹೇಳಿದೆ.

ಜಾಗತಿಕ ತೈಲ ಮಾರುಕಟ್ಟೆ ಪರಿಸ್ಥಿತಿಯ ಸಂದರ್ಭದಲ್ಲಿ ಉಕ್ರೇನ್ ನ ಸಂಘರ್ಷ ಮತ್ತು ವೆನೆಝುವೆಲಾದ ಪರಿಸ್ಥಿತಿಯ ಬಗ್ಗೆಯೂ ಟ್ರಂಪ್ ಮತ್ತು ಪುಟಿನ್ ಚರ್ಚೆ ನಡೆಸಿದರು ಎಂದು ರಶ್ಯ ಅಧ್ಯಕ್ಷರ ವಿದೇಶಾಂಗ ನೀತಿ ಸಹಾಯಕ ಯೂರಿ ಉಶಕೋವ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮಾತುಕತೆ ಉತ್ಪಾದಕ ಮತ್ತು ಪ್ರಾಮಾಣಿಕವಾಗಿತ್ತು. ಇರಾನ್ನೊಂದಿಗಿನ ಸಂಘರ್ಷದ ಸುತ್ತಮುತ್ತಲಿನ ಪರಿಸ್ಥಿತಿ, ಉಕ್ರೇನ್ ಶಾಂತಿ ಮಾತುಕತೆಯ ಬಗ್ಗೆ ಚರ್ಚೆ ನಡೆಸಲಾಗಿದೆ. ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ದಕ್ಕೆ ತ್ವರಿತ ರಾಜಕೀಯ ಮತ್ತು ರಾಜತಾಂತ್ರಿಕ ಇತ್ಯರ್ಥಕ್ಕೆ ಪುಟಿನ್ ಕರೆ ನೀಡಿದರು ಎಂದು ಯೂರಿ ಉಶಕೋವ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News