×
Ad

3 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ಇರಾನ್

Update: 2024-01-28 21:19 IST

Photo:NDTV

ಟೆಹ್ರಾನ್: ಇರಾನ್ ರವಿವಾರ 3 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದೆ. ಈ ಹಿಂದೆ ಹಲವು ಬಾರಿ ವಿಫಲವಾಗಿದ್ದ ರಾಕೆಟ್ ಬಳಸಿದ್ದ ಪ್ರಯೋಗಾರ್ಥ ಪರೀಕ್ಷೆ ಈ ಬಾರಿ ಯಶಸ್ವಿಯಾಗಿದ್ದು ಇದು ಇರಾನ್‍ನ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಸಾಮಥ್ರ್ಯ ಸುಧಾರಿಸುವಲ್ಲಿ ಮಹತ್ವದ್ದಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಇರಾನ್ ತನ್ನ ಪರಮಾಣು ಕಾರ್ಯಕ್ರಮಗಳನ್ನು ಕ್ಷಿಪ್ರಗತಿಯಲ್ಲಿ ವಿಸ್ತರಿಸುತ್ತಿರುವ ಬಗ್ಗೆ ಪಾಶ್ಚಿಮಾತ್ಯ ದೇಶಗಳು ಕಳವಳ ವ್ಯಕ್ತಪಡಿಸಿವೆ. ಇರಾನ್‍ನ ಗ್ರಾಮೀಣ ಸೆಮ್ನಾನ್ ಪ್ರಾಂತದ ಇಮಾಮ್ ಖಾಮಿನೈ ಬಾಹ್ಯಾಕಾಶ ಕೇಂದ್ರದಲ್ಲಿ 3 ಉಪಗ್ರಹಗಳನ್ನು ಹೊತ್ತ ರಾಕೆಟ್ ಬಾಹ್ಯಾಕಾಶದತ್ತ ನೆಗೆಯುವ ವೀಡಿಯೊವನ್ನು ಸರಕಾರಿ ಸ್ವಾಮ್ಯದ ಟಿವಿ ಪ್ರಸಾರ ಮಾಡಿದೆ. ಇದರಲ್ಲಿ ಒಂದು ಉಪಗ್ರಹ ಸಂಶೋಧನಾ ಉಪಗ್ರಹವಾಗಿದ್ದರೆ ಉಳಿದ 2 ಜಾಗತಿಕ ಸ್ಥಾನೀಕರಣ ಮತ್ತು ಸಂವಹನದ ಮೇಲೆ ಕೇಂದ್ರೀಕರಿಸಿದ ಸಣ್ಣ ಉಪಗ್ರಹಗಳಾಗಿವೆ. ಸಂಶೋಧನಾ ಉಪಗ್ರಹ ಈಗಾಗಲೇ ಭೂಮಿಗೆ ಸಿಗ್ನಲ್ ರವಾನಿಸಿದೆ ಎಂದು ಇರಾನ್‍ನ ಮಾಹಿತಿ ಮತ್ತು ಸಂವಹನ ಇಲಾಖೆ ಮಾಹಿತಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News