×
Ad

ಇಸ್ರೇಲ್ ಮೇಲೆ ಇರಾನ್ ನಿಂದ 100 ಕ್ಕೂ ಹೆಚ್ಚು ಡ್ರೋನ್‌ ದಾಳಿ: ಇಸ್ರೇಲ್ ಸೇನೆ ಹೇಳಿಕೆ

Update: 2025-06-13 11:43 IST
ಇಸ್ರೇಲ್‌ ದಾಳಿಯಿಂದ ಟೆಹ್ರಾನ್‌ ನಲ್ಲಿ ಹಾನಿಗೊಳಗಾದ ಕಟ್ಟಡ (Photo creit: AP)

ಜೆರುಸಲೆಂ: ಇರಾನಿನ ರಾಜಧಾನಿ ಟೆಹ್ರಾನ್ ಮೇಲಿನ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ ಇರಾನ್ ಡ್ರೋನ್‌ ದಾಳಿಗಳನ್ನು ನಡೆಸುತ್ತಿದೆ ಎಂದು ಇಸ್ರೇಲ್ ಸೇನೆ ಹೇಳಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಈ ಕುರಿತು ಹೇಳಿಕೆ ನೀಡಿರುವ ಇಸ್ರೇಲ್‌ ನ ಮುಖ್ಯ ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ಎಫೀ ಡೆಫ್ರಿನ್, “ಕಳೆದ ಕೆಲವು ಗಂಟೆಗಳಲ್ಲಿ, ಇರಾನ್ ಇಸ್ರೇಲ್ ನತ್ತ 100 ಕ್ಕೂ ಹೆಚ್ಚು ಡ್ರೋನ್‌ ದಾಳಿ ನಡೆಸಿದೆ. ದೇಶದ ರಕ್ಷಣಾ ವ್ಯವಸ್ಥೆಗಳು ಅಪಾಯಗಳನ್ನು ತಡೆಯಲು ಕಾರ್ಯನಿರ್ವಹಿಸುತ್ತಿವೆ. ಸುಮಾರು 200 ಇಸ್ರೇಲಿ ಫೈಟರ್ ಜೆಟ್‌ಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ. ಸುಮಾರು 100 ಡ್ರೋನ್ ಗಳನ್ನು ಹೊಡೆದುರುಳಿಸಿವೆ. ದಾಳಿಗಳು ಮುಂದುವರೆದಿವೆ," ಎಂದು ಎಂದು ಹೇಳಿದ್ದಾರೆ.

ಈ ಮಧ್ಯೆ ಜೋರ್ಡಾನ್‌ನ ನಾಗರಿಕ ವಿಮಾನಯಾನ ಪ್ರಾಧಿಕಾರವು ದೇಶದ ವಾಯುಪ್ರದೇಶವನ್ನು ಎಲ್ಲಾ ವಿಮಾನಗಳಿಗೆ ನಿರ್ಭಂಧಿಸಿ ಮುಚ್ಚಲಾಗುವುದು ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News