×
Ad

ಐಎಇಎಗೆ ಸಹಕಾರ ಅಮಾನತಿನಲ್ಲಿಡುವ ಮಸೂದೆಗೆ ಇರಾನ್ ಸಂಸತ್ ಅಸ್ತು

Update: 2025-06-25 21:11 IST

PC | REUTERS

ದುಬೈ:ವಿಶ್ವಸಂಸ್ಥೆಯ ಪರಮಾಣುಕಾವಲು ಸಂಸ್ಥೆ ‘ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ’ (ಐಎಇಎ)ಗೆ ಸಹಕಾರ ನೀಡುವುದನ್ನು ಅಮಾನತಿನಲ್ಲಿಡುವ ಮಸೂದೆಗೆ ಇರಾನ್ ಸಂಸತ್ ಬುಧವಾರ ಅನುಮೋದನೆ ನೀಡಿದೆ.

ಇಸ್ರೇಲ್ ಜೊತೆ 12 ದಿನಗಳ ಭೀಕರ ಯುದ್ಧದ ಬಳಿಕ ಕದನವಿರಾಮವನ್ನು ಘೋಷಿಸಿದ ಬೆನ್ನಲ್ಲೇ ಇರಾನ್ ಸಂಸತ್ ಈ ಕ್ರಮವನ್ನು ಕೈಗೊಂಡಿದೆ. ಈ ಮಸೂದೆಗೆ ಇರಾನ್‌ ನ ಪಾಲಕ ಮಂಡಳಿ (ಗಾರ್ಡಿಯನ್ ಕೌನ್ಸಿಲ್)ಯು ಅನುಮೋದನೆಯನ್ನು ಇನ್ನೂ ನೀಡಬೇಕಾಗಿದೆ. ಆನಂತರವಷ್ಟೇ ವಿಧೇಕವು ಕಾಯ್ದೆಯಾಗಿ ಜಾರಿಗೆ ಬರಲಿದೆ. ಭವಿಷ್ಯದಲ್ಲಿ ಅಂತಾರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ (ಐಎಇಎ) ಇರಾನ್‌ ನಲ್ಲಿ ಪರಿಶೀಲನೆಯನ್ನು ನಡೆಸಬೇಕಾದರೆ ಅದು ಇರಾನ್‌ ನ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿಯ ಅನುಮೋದನೆಯನ್ನು ಪಡೆಯುವ ಅಗತ್ಯವಿರುತ್ತದೆ.

ಈ ಮಧ್ಯೆ ಇರಾನ್ ತನ್ನ ನಾಗರಿಕ ಪರಮಾಣು ಕಾರ್ಯಕ್ರಮವನ್ನು ತ್ವರಿತಗೊಳಿಸಲಿದೆಯೆಂದು ಇರಾನಿ ಸಂಸತ್‌ ನ ಸ್ಪೀಕರ್ ಮುಹಮ್ಮದ್ ಬಾಖೆರ್ ಖ್ವಾಲಿಬಾಫ್ ಹೇಳಿದ್ದಾರೆಂದು ಇರಾನ್‌ ನ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ತಾನು ಅಣ್ವಸ್ತ್ರ ಹೊಂದಿರುವುದನ್ನು ಇರಾನ್ ನಿರಾಕರಿಸುತ್ತಲೇ ಬಂದಿದೆ ಮತ್ತು ಅದು ಅಣ್ವಸ್ತ್ರ ಪ್ರಸರಣವನ್ನು ಬಾಧ್ಯತೆಗಳನ್ನು ಉಲ್ಲಂಘಿಸಿದೆಯೆಂದು ಈ ತಿಂಗಳ ಆರಂಭದಲ್ಲಿ ಐಎಇಎ ಅಂಗೀಕರಿಸಿದ ನಿರ್ಣಯವೊಂದು ಘೋಷಿಸಿತ್ತು. ಐಓಎಇ ನಿರ್ಣಯದ ಬೆನ್ನಲ್ಲೇ ಇಸ್ರೇಲ್ , ಇರಾನಿನ ಅಣುಶಕ್ತಿ ಸ್ಥಾವರಗಳು ಹಾಗೂ ಸೈನಿಕ ನೆಲೆಗಳ ಮೇಲೆ ದಾಳಿ ನಡೆಸಿತ್ತು.

ಇರಾನ್‌ ನ ಅಣುಸ್ಥಾವರಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ಖಂಡಿಸಲು ಕೂಡಾ ಐಎಇಎ ನಿರಾಕರಿಸಿರುವುದು, ಅದು ತನ್ನ ಅಂತಾರಾಷ್ಟ್ರೀಯ ಮಟ್ಟದ ವಿಶ್ವಾಸಾರ್ಹತೆಯನ್ನು ಮಾರಾಟಕ್ಕಿರಿಸಿದೆಯೆಂದು ಖ್ವಾಲಿಬಾಫ್ ಆಪಾದಿಸಿದ್ದಾರೆ.

ಇರಾನ್ ಸಂಸತ್‌ನ ರಾಷ್ಟ್ರೀಯ ಭದ್ರತಾ ಸಮಿತಿಯು, ಮಸೂದೆಯ ಸಾಮಾನ್ಯ ರೂಪುರೇಷೆಗೆ ಆನುಮೋದನೆ ನೀಡಿದೆ. ಅಣುಸ್ಥಾವರಗಳಲ್ಲಿ ಕಣ್ಗಾವಲು ಕ್ಯಾಮರೆಗಳನ್ನು, ಐಎಇಎಇನಿಂದ ಪರಿಶೀಲನೆ ಹಾಗೂ ವರದಿ ಸಲ್ಲಿಕೆಯನ್ನು ಮಸೂದೆಯು ಅಮಾನತಿನಲ್ಲಿರಿಸಲಿದೆ.

ಇರಾನ್ ಸಂಸತ್ ಈ ವಿವಾದಾತ್ಮಕ ಮಸೂದೆಗೆ ಅನುಮೋದನೆ ನೀಡಿರುವ ಬಗ್ಗೆ ಐಎಇಎ ತಕ್ಷಣವೇ ಪ್ರತಿಕ್ರಿಯಿಸಿಲ್ಲ. ಆದರೆ ಐಎಇಎ ವರಿಷ್ಠ ರಫಾಯೆಲ್ ಗ್ರೊಸ್ಸಿ ಅವರು ಹೇಳಿಕೆಯೊಂದನ್ನು ನೀಡಿ, ಜೂನ್ 13ರಂದು,ಇಸ್ರೇಲ್ ಸೇನೆಯು ಇರಾನ್ ಯುರೇನಿಯಂ ಅನ್ನು ಸಂವರ್ಧನೆಗೊಳಿಸುತ್ತಿತ್ತೆನ್ನಲಾದ ಸ್ಥಾವರಗಳನ್ನು ಪರಿಶೀಲಿಸಿದ್ದ ತಪಾಸಣೆಕಾರರ ವರದಿಯನ್ನು ತಾನು ಕೋರುತ್ತಿರುವುದಾಗಿ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News