ಇಸ್ರೇಲ್ ದಾಳಿಯನ್ನು ಯಶಸ್ವಿಯಾಗಿ ತಡೆಯಲಾಗಿದೆ: ಇರಾನ್
Screengrab:X
ಇರಾನ್: ಇಸ್ರೇಲ್ ದಾಳಿಯನ್ನು ಇರಾನ್ ನ ವಾಯು ರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ತಡೆದಿದೆ. ಆದರೆ ಕೆಲವು ಸ್ಥಳಗಳಿಗೆ ಸೀಮಿತ ಹಾನಿಯಷ್ಟೇ ಉಂಟಾಗಿದೆ ಎಂದು ಇರಾನ್ ಹೇಳಿದೆ.
ಇಸ್ರೇಲ್ ಸೇನೆಯು ಇರಾನ್ ನಲ್ಲಿನ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಶನಿವಾರ ಮುಂಜಾನೆ ದಾಳಿಗಳನ್ನು ನಡೆಸಿತ್ತು. ಇಸ್ರೇಲ್ ದಾಳಿಗಳು ಇಲಾಮ್, ಖುಜೆಸ್ತಾನ್ ಮತ್ತು ಟೆಹ್ರಾನ್ ಪ್ರಾಂತ್ಯಗಳಲ್ಲಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿದೆ ಎಂದು ಇರಾನ್ ನ ಮಿಲಿಟರಿ ದೃಢಪಡಿಸಿತ್ತು.
ಟೆಹ್ರಾನ್ ಸುತ್ತಮುತ್ತ ಹಲವಾರು ಸ್ಫೋಟಗಳು ವರದಿಯಾಗಿವೆ. ರಾಜಧಾನಿಯಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗೆ ಸೇರಿದ ಯಾವುದೇ ಮಿಲಿಟರಿ ಕೇಂದ್ರಕ್ಕೆ ದಾಳಿಯಿಂದ ಹಾನಿಯಾಗಿಲ್ಲ ಎಂದು ಇರಾನಿನ ಮಾಧ್ಯಮ ವರದಿಗಳು ತಿಳಿಸಿದೆ.
2024ರ ಅಕ್ಟೋಬರ್ 1ರಂದು ಇಸ್ರೇಲ್ ಮೇಲೆ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿಗೆ ಪ್ರತಿಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.