ಪರಮಾಣು ಮಾತುಕತೆಗೆ ಯಾವುದೇ ಯೋಜನೆಗಳಿಲ್ಲ: ಇರಾನ್
Update: 2025-06-27 21:12 IST
PHOTO | X ; @araghchi
ಟೆಹ್ರಾನ್: ಪರಮಾಣು ಮಾತುಕತೆಗಾಗಿ ಅಮೆರಿಕದ ಜೊತೆ ಸಭೆ ನಡೆಸುವ ಯಾವುದೇ ಯೋಜನೆಯನ್ನು ಇರಾನ್ ಹೊಂದಿಲ್ಲ ಎಂದು ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಗುರುವಾರ ಹೇಳಿದ್ದು, ಮುಂದಿನ ವಾರ ಇರಾನಿನ ಜೊತೆ ಮಾತುಕತೆ ನಡೆಸಲು ಅಮೆರಿಕ ಯೋಜಿಸಿದೆ ಎಂಬ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆಯನ್ನು ನಿರಾಕರಿಸಿದೆ.
ಇರಾನ್ ಪರಮಾಣು ಮಾತುಕತೆಗೆ ಬರುತ್ತದೆ ಎಂಬುದು ಕೇವಲ ಊಹಾಪೋಹ ಅಷ್ಟೇ. ಅದನ್ನು ಗಂಭೀರವಾಗಿ ಪರಿಗಣಿಸಬಾರದು ಎಂದವರು ಹೇಳಿದ್ದಾರೆ. ಸರ್ಕಾರಿ ಸ್ವಾಮ್ಯದ ಟಿವಿ ವಾಹಿನಿಯ ಜೊತೆ ಮಾತನಾಡಿದ ಅರಾಗ್ಚಿ ` ಹೊಸ ಮಾತುಕತೆಗಳನ್ನು ಪ್ರಾರಂಭಿಸಲು ಯಾವುದೇ ಒಪ್ಪಂದ, ವ್ಯವಸ್ಥೆ ಅಥವಾ ಸಂವಹನ ನಡೆದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ಎಂದು