ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧಕ್ಕೆ ಅಂತ್ಯವಾಡುವ ಯಾವುದೇ ಪ್ರಸ್ತಾಪವನ್ನು ಸ್ವಾಗತಿಸುತ್ತೇವೆ : ಇರಾನ್
Photo Credit : aljazeera.com
ಟೆಹ್ರಾನ್, ಅ.6: ಫೆಲೆಸ್ತೀನ್ ಜನತೆ ಮತ್ತು ಪ್ರತಿರೋಧ ಗುಂಪುಗಳು(ಹಮಾಸ್ ಹಾಗೂ ಇತರ ಸಶಸ್ತ್ರ ಹೋರಾಟಗಾರರ ಗುಂಪು) ಕೈಗೊಳ್ಳುವ ಯಾವುದೇ ಕದನ ವಿರಾಮ ನಿರ್ಧಾರವನ್ನು ಸ್ವಾಗತಿಸುವುದಾಗಿ ಇರಾನ್ ಹೇಳಿದೆ.
ಗಾಝಾದಲ್ಲಿ `ನರಮೇಧ'ಕ್ಕೆ ಅಂತ್ಯವನ್ನು ಮತ್ತು ಗಾಝಾದಿಂದ ಇಸ್ರೇಲ್ ಮಿಲಿಟರಿ ವಾಪಸಾತಿಯನ್ನು ಖಾತರಿಪಡಿಸುವ, ಫೆಲೆಸ್ತೀನೀಯರ ಸ್ವಯಂ ನಿರ್ಧಾರದ ಹಕ್ಕನ್ನು ಗೌರವಿಸುವ, ಮಾನವೀಯ ನೆರವಿನ ಪ್ರವೇಶವನ್ನು ಮತ್ತು ಗಾಝಾ ಮರು ನಿರ್ಮಾಣವನ್ನು ಖಾತರಿಪಡಿಸುವ ಯಾವುದೇ ಕದನ ವಿರಾಮ ಪ್ರಸ್ತಾಪವನ್ನು ಇರಾನ್ ಸ್ವಾಗತಿಸುತ್ತದೆ. ಈ ಕುರಿತ ಯಾವುದೇ ನಿರ್ಧಾರ ಫೆಲೆಸ್ತೀನ್ ಜನತೆ ಮತ್ತು ಪ್ರತಿರೋಧ ಗುಂಪಿನ ಅಧಿಕಾರ ವ್ಯಾಪ್ತಿಯೊಳಗೆ ಇರಬೇಕೆಂಬುದು ನಮ್ಮ ನಿಲುವು . ಹಿಂಸಾಚಾರವನ್ನು ಕೊನೆಗೊಳಿಸುವ ಜೊತೆಗೆ ಗಾಝಾದಲ್ಲಿ ಇಸ್ರೇಲ್ ಪಡೆ ನಡೆಸಿದ ಅಪರಾಧಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳವ ಬಗ್ಗೆಯೂ ನಿರ್ಧರಿಸಬೇಕಾಗಿದೆ ಎಂದು ಇರಾನಿನ ವಿದೇಶಾಂಗ ಇಲಾಖೆ ಹೇಳಿದೆ.