ಅಮೆರಿಕದೊಂದಿಗೆ ಒಪ್ಪಂದ ಅಂತಿಮ ಹಂತಕ್ಕೆ ಇನ್ನೂ ತಲುಪಿಲ್ಲ: ಇರಾನ್ ವಿದೇಶಾಂಗ ಸಚಿವ ಅರಾಘ್ಚಿ
ಅಬ್ಬಾಸ್ ಅರಾಘ್ಚಿ | Photo Credit : AP , PTI
ಟೆಹ್ರಾನ್: ಅಮೆರಿಕದೊಂದಿಗೆ ನಡೆಯುತ್ತಿರುವ ಮಾತುಕತೆಗಳ ಒಪ್ಪಂದ ಅಂತಿಮಗೊಳ್ಳುವ ಹಂತಕ್ಕೆ ಇನ್ನೂ ತಲುಪಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.
ಒಪ್ಪಂದದ ನಿಯಮಗಳನ್ನು ಇರಾನಿನ ಮಾಧ್ಯಮಗಳಿಗೆ ಸೋರಿಕೆ ಮಾಡಲಾಗಿದೆ ಎಂದು ಆರೋಪಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೆಹ್ರಾನ್ ಅನ್ನು ಟೀಕಿಸಿದ ಕೆಲವೇ ಹೊತ್ತಿನ ಬಳಿಕ ಅರಾಘ್ಚಿ ಈ ಪ್ರತಿಕ್ರಿಯೆ ನೀಡಿದ್ದಾರೆ.
"ಒಪ್ಪಂದ ಇನ್ನೂ ಅಂತಿಮಗೊಂಡಿಲ್ಲ. ಅಂತಿಮಗೊಳಿಸುವವರೆಗೆ ಅದರ ವಿಷಯದ ಬಗ್ಗೆ ಮಾಧ್ಯಮಗಳು ಊಹಾಪೋಹಗಳನ್ನು ಹರಡುವುದನ್ನು ನಿಲ್ಲಿಸಬೇಕು" ಎಂದು ಅವರು ಸಾಮಾಜಿಕ ಜಾಲತಾಣ Xನಲ್ಲಿ ತಿಳಿಸಿದ್ದಾರೆ.
The Islamabad Memorandum of Understanding has never been closer. Pending its finalization, the media should refrain from entering speculation about its content.
— Seyed Abbas Araghchi (@araghchi) June 12, 2026
In line with our responsible and transparent approach, all details will be shared with the public in due course.
ಒಪ್ಪಂದದ ಎಲ್ಲ ವಿವರಗಳನ್ನು ಸೂಕ್ತ ಸಮಯದಲ್ಲಿ ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.
ಒಪ್ಪಂದದ ಕರಡು ನಿಯಮಗಳು ಇರಾನಿನ ಮಾಧ್ಯಮಗಳಿಗೆ ಸೋರಿಕೆಯಾಗಿವೆ ಎಂದು ಟ್ರಂಪ್ ಆರೋಪಿಸಿದ್ದ ಬೆನ್ನಲ್ಲೇ ಅರಾಘ್ಚಿ ಈ ಹೇಳಿಕೆ ನೀಡಿದ್ದಾರೆ.