×
Ad

ಇರಾನಿನ ಪರಮಾಣು ಕೇಂದ್ರಗಳ ಮೇಲೆ ದಾಳಿಗೆ ಸಿದ್ಧತೆ ನಡೆಸುತ್ತಿರುವ ಇಸ್ರೇಲ್ : ವರದಿ

Update: 2025-05-21 16:34 IST

ಸಾಂದರ್ಭಿಕ ಚಿತ್ರ | PC : aljazeera.com

 

ವಾಷಿಂಗ್ಟನ್ : ಅಮೆರಿಕಗೆ ದೊರೆತ ಹೊಸ ಗುಪ್ತಚರ ಮಾಹಿತಿಯ ಪ್ರಕಾರ, ಇರಾನಿನ ಪರಮಾಣು ಕೇಂದ್ರಗಳ ಮೇಲೆ ದಾಳಿ ಮಾಡಲು ಇಸ್ರೇಲ್ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು CNN ವರದಿ ಮಾಡಿದೆ.

ಇಸ್ರೇಲ್ ದಾಳಿ ಮಾಡಲು ನಿರ್ಧರಿಸಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ನಿಜವಾಗಿಯೂ ದಾಳಿ ನಡೆಸುತ್ತದೆಯೇ ಎಂಬುದರ ಕುರಿತು ಅಮೆರಿಕ ಸರಕಾರದೊಳಗೆಯೇ ವಿಭಿನ್ನ ಅಭಿಪ್ರಾಯಗಳಿವೆ ಎಂದು ವರದಿ ಹೇಳಿಕೊಂಡಿದೆ.

ವರದಿಯು ತೈಲ ಬೆಲೆಗಳು ಶೇ.1ಕ್ಕಿಂತ ಹೆಚ್ಚು ಏರಿಕೆಯಾಗಲು ಕಾರಣವಾಗಿದೆ. ಈ ವರದಿಯನ್ನು ತಕ್ಷಣಕ್ಕೆ ದೃಢೀಕರಿಸಲು ಸಾಧ್ಯವಾಗಲಿಲ್ಲ ರಾಯಿಟರ್ಸ್ ವರದಿ ಮಾಡಿದೆ.

ಈ ಬಗ್ಗೆ ವಾಷಿಂಗ್ಟನ್‌ನಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿ, ಇಸ್ರೇಲ್ ಪ್ರಧಾನಿ ಕಚೇರಿ ಮತ್ತು ಇಸ್ರೇಲ್ ಮಿಲಿಟರಿ ತಕ್ಷಣಕ್ಕೆ ಪ್ರತಿಕ್ರಿಯಿಸಲಿಲ್ಲ ಎಂದು ವರದಿ ಉಲ್ಲೇಖಿಸಿದೆ.

ಇರಾನಿನ ಪರಮಾಣು ಕೇಂದ್ರಗಳ ಮೇಲೆ ಇಸ್ರೇಲ್ ದಾಳಿಯ ಸಾಧ್ಯತೆ ಇತ್ತೀಚಿನ ತಿಂಗಳುಗಳಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ವರದಿಯು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News