×
Ad

ಇರಾನ್ ನ ಸರ್ಕಾರಿ ಟಿವಿ ಮೇಲೆ ಇಸ್ರೇಲ್ ನಿಂದ ದಾಳಿ; ಸುದ್ದಿ ಓದುತ್ತಿದ್ದಾಗಲೇ ಕುರ್ಚಿ ತೊರೆದ ನಿರೂಪಕಿ

Update: 2025-06-16 21:12 IST

PC : X\ @clashreport

ಟೆಹ್ರಾನ್ : ಇರಾನ್‌ ನ ಸರ್ಕಾರಿ ಟಿವಿ ಮೇಲೆ ಇಸ್ರೇಲ್ ದಾಳಿ ನಡೆಸಿದೆ ಎಂದು ಇರಾನ್ ಹೇಳಿದೆ.

ಟೆಹ್ರಾನ್ನ ಟಿವಿ ಸ್ಟೇಷನ್ ಮೇಲೆ ಇಸ್ರೇಲಿ ಕ್ಷಿಪಣಿ ದಾಳಿ ಮಾಡಿದ ವೇಳೆ ಸುದ್ದಿ ಓದುತ್ತಿರುವ ನಿರೂಪಕಿಯೊಬ್ಬರು ಕುರ್ಚಿಯಿಂದ ಕೆಳಗಿಳಿಯುವುದನ್ನು aljzeera.com ವೀಡಿಯೋದಲ್ಲಿ ತೋರಿಸಿದೆ.

ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ಪ್ರಾರಂಭವಾದ ನಾಲ್ಕನೇ ದಿನ ಈ ಘಟನೆ ನಡೆದಿದೆ. ಎರಡೂ ದೇಶಗಳ ನಡುವೆ ದಾಳಿಗಳು ಹೆಚ್ಚಾಗುತ್ತಿವೆ.

ಇರಾನ್ನ ರಾಜಧಾನಿ ಟೆಹ್ರಾನ್ ಮೇಲೆ ಇಸ್ರೇಲ್ ನಡೆಸಿದ ಇತ್ತೀಚಿನ ಕ್ಷಿಪಣಿ ದಾಳಿಯಲ್ಲಿ ಇಸ್ರೇಲ್ ತನ್ನ ಮೇಲೆ ದಾಳಿ ಮಾಡಿದೆ ಎಂದು ಇರಾನ್ ನ ಸರ್ಕಾರಿ ಟಿವಿ ಹೇಳಿದೆ.

ಇರಾನ್ ಪಡೆಗಳು ಟೆಲ್ ಅವೀವ್ ನಿವಾಸಿಗಳಿಗೆ ಸ್ಥಳಾಂತರಗೊಳ್ಳುವಂತೆ ಎಚ್ಚರಿಕೆ ನೀಡಿರುವ ನಡುವೆ ಟೆಹ್ರಾನ್ನಾದ್ಯಂತ ಬಹು ಸ್ಫೋಟಗಳು ಕೇಳಿಬಂದಿವೆ.

ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ 220 ಕ್ಕೂ ಹೆಚ್ಚು ಎನ್ನಲಾಗಿದೆ. ಇದರಲ್ಲಿ 70 ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News