×
Ad

ಇರಾಕ್ | ಟರ್ಕಿಯ ವೈಮಾನಿಕ ದಾಳಿಯಲ್ಲಿ 5 ಮಂದಿ ಮೃತ್ಯು

Update: 2024-10-25 21:48 IST

PC : aljazeera.com

ಬಗ್ದಾದ್ : ನಿಷೇಧಿತ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ(ಪಿಕೆಕೆ)ಯೊಂದಿಗೆ ಸಂಯೋಜಿತವಾಗಿರುವ ಸಿಂಜಾರ್ ಪ್ರತಿರೋಧ ಗುಂಪನ್ನು ಗುರಿಯಾಗಿಟ್ಟುಕೊಂಡು ಉತ್ತರ ಇರಾಕ್‍ನಲ್ಲಿ ಟರ್ಕಿ ಶುಕ್ರವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಐದು ಮಂದಿ ಮೃತಪಟ್ಟಿರುವುದಾಗಿ ಸ್ಥಳೀಯ ಮೂಲಗಳು ಹೇಳಿವೆ.

ನಿನೆವೆಹ್ ಪ್ರಾಂತದಲ್ಲಿ ಸಿಂಜಾರ್ ಪ್ರತಿರೋಧ ಘಟಕಗಳನ್ನು ಗುರಿಯಾಗಿಸಿ ಟರ್ಕಿ ಸರಣಿ ವೈಮಾನಿಕ ದಾಳಿ ನಡೆಸಿದ್ದು ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಅಂಕಾರಾ ಬಳಿ ಟರ್ಕಿಯ ಉನ್ನತ ರಕ್ಷಣಾ ಸಂಸ್ಥೆ ಟರ್ಕಿಶ್ ಏರೋಸ್ಪೇಸ್ ಇಂಡಸ್ಟ್ರೀಸ್ (ಟಿಎಐ) ಮೇಲೆ ಬುಧವಾರ ನಡೆದ ದಾಳಿಗೆ ಪ್ರತೀಕಾರವಾಗಿ ಇರಾಕ್ ಮತ್ತು ಸಿರಿಯಾದಲ್ಲಿ 30 ನೆಲೆಗಳನ್ನು ಗುರಿಯಾಗಿಸಿ ಗುರುವಾರ ಟರ್ಕಿ ಸರಣಿ ವೈಮಾನಿಕ ದಾಳಿ ನಡೆಸಿತ್ತು. ಸಿರಿಯಾದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ 27 ನಾಗರಿಕರು ಹತರಾಗಿರುವುದಾಗಿ ಸಿರಿಯಾದ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News