×
Ad

ಅಮೆರಿಕ ಪಡೆಗಳ ತ್ವರಿತ ನಿರ್ಗಮನಕ್ಕೆ ಇರಾಕ್ ಆಗ್ರಹ

Update: 2024-01-10 23:56 IST

ಬಗ್ದಾದ್ : ಗಾಝಾದಲ್ಲಿ ನಡೆಯುತ್ತಿರುವ ಯುದ್ಧವು ಪ್ರಾದೇಶಿಕ ಸಂಘರ್ಷದ ರೂಪ ತಳೆಯಬಾರದು ಎಂದು ಹೇಳಿರುವ ಇರಾಕ್ ಪ್ರಧಾನಿ ಮುಹಮ್ಮದ್ ಶಿಯಾ ಅಲ್-ಸುಡಾನಿ, ಇರಾಕ್‍ನಲ್ಲಿರುವ ಅಮೆರಿಕ ನೇತೃತ್ವದ ಮೈತ್ರಿ ಪಡೆಯು ಇರಾಕ್ ನೆಲದಿಂದ ತ್ವರಿತವಾಗಿ ನಿರ್ಗಮಿಸುವುದನ್ನು ತಾವು ಬಯಸುತ್ತಿದ್ದೇವೆ. ಆದರೆ ಇದಕ್ಕೆ ಯಾವುದೇ ಗಡುವು ನಿರ್ಧರಿಸಿಲ್ಲ ಎಂದಿದ್ದಾರೆ.

ಅಮೆರಿಕದ ಜತೆಗಿನ ಸಂಬಂಧವನ್ನು ಮರುಸಂಘಟಿಸುವ ಅಗತ್ಯವಿದೆ. ಇರಾಕ್ ಮತ್ತು ಈ ಪ್ರದೇಶದಲ್ಲಿನ ಸ್ಥಿರತೆಯನ್ನು ಹಾಳು ಮಾಡಲು ಆಂತರಿಕ ಅಥವಾ ವಿದೇಶಿ ಶಕ್ತಿಗಳಿಗೆ ಅವಕಾಶ ನೀಡಲಾಗದು. ತಿಳುವಳಿಕೆ ಮತ್ತು ಮಾತುಕತೆಯ ಮೂಲಕ ನಿರ್ಗಮನ ಪ್ರಕ್ರಿಯೆ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ. ಬಗ್ದಾದ್‍ನಲ್ಲಿ ಹಿಜ್ಬುಲ್ಲಾ ನೆಲೆಗಳ ಮೇಲೆ ಅಮೆರಿಕ ಇತ್ತೀಚೆಗೆ ನಡೆಸಿದ ವೈಮಾನಿಕ ದಾಳಿಗೆ ತೀವ್ರ ವಿರೋಧ ಸೂಚಿಸಿದ್ದ ಇರಾಕ್, ತನಗೆ ಮಾಹಿತಿ ನೀಡದೆ ಅಮೆರಿಕ ಪಡೆ ಈ ದಾಳಿ ನಡೆಸಿದೆ ಎಂದು ಆಕ್ಷೇಪಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News